SHARE

ಬೆಂಗಳೂರು: ದೇಶದ ಗಮನ ಸೆಳೆಯಲು ಅದ್ದೂರಿ ಪ್ರಮಾಣ ವಚನ ಕಾರ್ಯಕ್ರಮ ಏರ್ಪಡಿಸಿದ ಮಧ್ಯೆಯೇ ವರುಣ ಆಗಮಿಸಿ ಅಸ್ತವ್ಯಸ್ತಗೊಳಿಸಿದ್ದಾನೆ. ಸಂಜೆ 4ಕ್ಕೆ ನಡೆಯಬೇಕಿದ್ದ ಎಚ್. ಡಿ. ಕುಮಾರಸ್ವಾಮಿ ಸರಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈಗ ಗುಡುಗು ಸಿಡಿಲಿನ ಭಾರಿ ಮಳೆ ಬಂದು ಕಾರ್ಯಕ್ರಮ ಅಡಚಣೆ ಮಾಡಿದೆ. ಜನ ಮಳೆಯ ರಕ್ಷಣೆಗೆ ಕಟಿಂಗ್ಸ್, ಬ್ಯಾನರ್ಸ್ ಆಶ್ರಯ ಪಡೆದರೆ ಇನ್ನೂ ಕೆಲವು ಕಾರ್ಯಕರ್ತರು ಉತ್ಸಾಹದಿಂದ ಮಳೆಯಲ್ಲಿ ನೆಂದು ಕುಣಿದು ಕುಪ್ಪಳಿಸಿ ಎಂಜಾಯ ಮಾಡಿದರು.