SHARE

ಬೆಳಗಾವಿ: ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಮಾಜಿ ಪ್ರಧಾನಿ ವಾಜಪೇಯಿ & ಪ್ರಧಾನಿ ಮೋದಿ ಅವರ ಗಾಳಿಯಲ್ಲಿ ಒಟ್ಟು ಮೂರು ಬಾರಿ ಸಂಸತ್ತಿಗೆ ಆಯ್ಕೆಯಾಗಿ ಮಾಡಿದ ಸಾಧನೆ ಶೂನ್ಯ ಎಂಬರ್ಥದ ಬರಹ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.ಬೆಳಗಾವಿ ಹಿಂದೂ ಹೆಸರಿನ ಪೇಜನಲ್ಲಿ ಸಂಸದರು ನಿಷ್ಕ್ರಿಯ ರಾಗಿದ್ದು ಸಾಕಷ್ಟು ಸರಕಾರಿ ಯೋಜನೆಗಳನ್ನು ತಂದು ಚಟುವಟಿಕೆಯಿಂದ ಕೆಲಸ ಮಾಡುವಲ್ಲಿ ಹಿಂದುಳಿದಿದ್ದಾರೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.