SHARE

ಬೆಂಗಳೂರು: ಕಾಂಗ್ರೇಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡೋದಾಗಿ ಸದನದಲ್ಲಿ ಎಚ್ಚರಿಕೆ ನಿಡಿ ಬಿಎಸ್‍ವೈ ಹೊರ ನಡೆದರು.ಕುಮಾರಸ್ವಾಮಿ ಭಾಷಣದ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ಅವರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಡೆಸಿಕೊಂಡ ರೀತಿ ಬಗ್ಗೆ ಮರುಕ ವ್ಯಕ್ತ ಪಡಿಸಿದರು. ಭಾಷಣದ ಕೊನೆಗೆ ಜೆಡಿಎಸ್ ನ ಪ್ರಣಾಳಿಕೆಯನ್ನು ಓದಿ ಲೇವಡಿ ಮಾಡಿದ ಯಡಿಯೂರಪ್ಪ, 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ರಾಜ್ಯ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ಧಾರೆ.