SHARE

ಬೆಳಗಾವಿ: ಐದು ದಿನಗಳಿಂದ ನಾಪತ್ತೆಯಾಗಿದ್ದ ಇಲ್ಲಿನ ವಡಗಾವಿ ಮಲಪ್ರಭಾ ನಗರದ ಬಾಲಕನೊಬ್ಬ ಇಂದು ಅದೇ ಪ್ರದೇಶದ ಗೋಬರ್ ಗುಂಡಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಗಣೇಶ ಹೊಸಮನಿ (7) ಎಂಬ ಬಾಲಕ ಪೋಟೆ ಮಾಳದ ಗೋಬರ ಗುಂಡಿಯಲ್ಲಿ ಬಿದ್ದು ಅಸುನೀಗಿದ್ದಾನೆ. ಇಂದು ಬಾಲಕನ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸ್ & ಅಗ್ನಿಶಾಮಕ ಸಿಬ್ಬಂಧಿ ಶವ ತೆಗೆಯುವ ಕಾರ್ಯ ಕೈಗೊಂಡರು. ಕಳೆದ ಮಂಗಳವಾರವೇ ಮನೆಯಿಂದ ಹೊರಹೋಗಿದ್ದ ಬಾಲಕ ಪತ್ತೆಯಾಗದ್ದರಿಂದ ಪಾಲಕರು ತೀವ್ರ ತಪಾಸಣೆ ಕೈಗೊಂಡಿದ್ದರು. ಬಾಲಕ ಆಟ ಆಡುವ ಭರದಲ್ಲಿ ಗೋಬರ್ ಗುಂಡಿಗೆ ಬಿದ್ದು ಅಸುನೀಗಿರಬಹುದು ಎಂದು ಶಂಕಿಸಲಾಗಿದೆ.