SHARE

ಬೆಳಗಾವಿ: ತಮ್ಮ ಎಂದಿನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿಂದು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿ ಬಂದ ನೂರಾರು ಗ್ರಾಮೀಣ ಅಂಚೆ ಸೇವಕರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಸರಕಾರದ ವಿರುದ್ದ ಪ್ರತಿಭಟಿಸಿದರು.

ಅಂಚೆ ನೌಕರರನ್ನು ಸುಮಾರು ವರ್ಷಗಳಿಂದ ದುಡಿಸಿಕೊಂಡು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. HD ವರದಿಯ ಶೀಘ್ರ ಅನುಷ್ಠಾನಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭ ಆಗ್ರಹಿಸಿದರು. ಗ್ರಾಮೀಣ ಅಂಚೆ ಸೇವಕರಿಗೆ ಗರಿಷ್ಠ 8 ಗಂಟೆ ಕೆಲಸ ಕೊಟ್ಟು ಸರಿಯಾದ ಪರಿಷ್ಕೃತ ಸಂಭಾವನೆ ನೀಡಬೇಕೆಂದು ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ರವಾಣಿಸಿದರು. ಪ್ರತಿಭಟನೆಯಲ್ಲಿ ಸಂಘದ ಪ್ರಾದೇಶಿಕ ಅಧ್ಯಕ್ಷ ಅಶೋಕ ಸುತಾರ, ಕಾರ್ಯದರ್ಶಿ ಬಿ.ಆರ್.ಮಹಾಜಿಕ ಹಾಗೂ ನೂರಾರು ಗ್ರಾಮೀಣ ಅಂಚೆ ಸಹಾಯಕರು ಉಪಸ್ಥಿತರಿದ್ದರು.