SHARE

ಬೆಳಗಾವಿ: ಕೊನೆಗೂ ಬೆಳಗಾವಿ ಜಿಲ್ಲೆಯನ್ನು ಗಮನಕ್ಕೆ ತೆಗೆದುಕೊಂಡ ಸಮ್ಮಿಶ್ರ ಸರಕಾರ ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಚಿವ ಸಂಪುಟಕ್ಜೆ ಸೇರಿಸಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಹ ಅವರೇ ನಿಭಾಯಿಸುವುದು ಖಚಿತವಾಗಿದೆ. ಬೆಳಗಾವಿ ಜಿಲ್ಲೆ ವತಿಯಿಂದ ಸದ್ಯಕ್ಕೆ ರಮೇಶ ಜಾರಕಿಹೊಳಿ ಮಾತ್ರ ಅದೃಷ್ಟ ಗಿಟ್ಟಿಸಿಕೊಂಡಿದ್ದು, ಇತರ ಪ್ರಬಲ ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ.