SHARE

ಬೆಳಗಾವಿ: ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ಹೊಟೇಲ್ ಮಾಲಿಕರಿಗೆ ಮತ್ತು ಅಲ್ಲಿನ ಕೆಲಸಗಾರರಿಗೆ ಕೆಲವರು ಹೊಡೆದು ದಾಂಧಲೆ ಮಾಡಿದರೂ ಪೊಲೀಸರು ಕಾನೂನು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಹೊಟೇಲ್ ಅಸೋಸಿಯೇಷನ್ ಇಂದು ಪ್ರತಿಭಟನೆ ನಡೆಸಿತು. ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೂಡಲೇ ಅಪರಾಧ ಮಾಡಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರಿಗೆ ಮನವಿ ಸಲ್ಲಿಸಿದರು.

ಹೊಟೇಲ್ ಮಾಲೀಕರ ಅಸೋಸಿಯೇಷನ್ ಬೆಳಗಾವಿ ವತಿಯಿಂದ ಅಧ್ಯಕ್ಷ ವಿಜಯ ಸಾಲಿಯಾನ, ಚಂದ್ರಶೇಖರ ಶೆಟ್ಟಿ, ಗಿರೀಶ್ ಪೈ, ರಾಮಮೋಹನ್ ನಾಯಕ ಸೇರಿದಂತೆ ಮುಂತಾದವರು.