SHARE

ಬೆಳಗಾವಿ: ಮುಂಗಾರು ಮಾನ್ಸೂನ್ ಗೆ ತತ್ತರಿಸಿರುವ ಬೆಳಗಾವಿ ನಾಗರಿಕರ ಸಹಾಯಕ್ಕೆ ಮಹಾನಗರ ಪಾಲಿಕೆ ಸಜ್ಜಾಗಿದೆ. ಕಾರ್ಪೋರೇಷನ್ ರೆಸ್ಕ್ಯೂ ಟೀಂ ಸಿದ್ದಪಡಿಸಲಾಗಿದ್ದು, ಮಳೆ ಅವಾಂತರಗಳಿಂದ ಜನತೆಗೆ ಆಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಸಹಾಯಕ್ಕೆ ಬರಲು ಸಿದ್ದವಾಗಿದ್ದೇವೆ ಎಂದು ಪಾಲಿಕೆ ಆಯುಕ್ತ ಕೃಷ್ಟೇಗೌಡ ತಾಯನ್ನವರ ತಿಳಿಸಿದ್ದಾರೆ.ಮನೆಗಳಿಗೆ ಹಾನಿ, ವಿದ್ಯುತ್ ಕಂಭಗಳು & ಮರಗಳು ಬಿದ್ದಾಗ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದಾಗ, ಗಟಾರುಗಳ, ನಾಲಾಗಳ ಸ್ವಚ್ಛತೆ ಸಂದರ್ಭ ಸಹಾಯಕ್ಕೆ ಬರಲು ಪಾಲಿಕೆ ಟೀಂ ಸಜ್ಜಾಗಿದ್ದಾರೆ ಎಂದು ಪಾಲಿಕೆ ಎಂಜಿನೀಯರ್ ಲಕ್ಷ್ಮೀ ಸುಳಗೇಕೆ, ಆರ್. ಎಸ್. ನಾಯಕ ಹಾಗೂ ಪರಿಸರ ಅಧಿಕಾರಿ ಉದಯ ಕುಮಾರ ತಿಳಿಸಿದ್ದಾರೆ. ಮಳೆಗಾಲವಾದ್ದರಿಂದ ಜನತೆ ಆರೋಗ್ಯದ ಕಡೆಗೆ ಎಚ್ಚರವಹಿಸಬೇಕು. ಹೊಟೇಲಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿನೀರು, ಶುದ್ದ ಆಹಾರ ಒದಗಿಸಬೇಕೆಂದು ಪಾಲಿಕೆ ಆರೋಗ್ಯಾಧಿಕಾರಿ ಶಶಿಧರ ನಾಡಗೌಡ ತಿಳಿಸಿದ್ದಾರೆ.