SHARE

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರ ತಂಡ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದೆ

ವಿಜಯಪುರದ ಸಿಂದಗಿ ಮೂಲದ ಪರಶುರಾಮನ್ ವಾಗ್ಮೋರೆ ಎಂಬಾತನನ್ನು ಬಂಧಿಸಿದ್ದು, ಇವನೇ ಗೌರಿ ಲಂಕೇಶ್ ರಿಗೆ ಗುಂಡು ಹಾರಿಸಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪರಶುರಾಮ್ ವಾಗ್ಮೋರೆಯನ್ನು ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್‌ಐಟಿ ಜೂನ್ 24 ರವರೆಗೆ 14 ದಿನಗಳ ವಶಕ್ಕೆ ಪಡೆದಿದೆ.

ಎಸಿಎಂಎಂ ಕೋರ್ಟ್ ಗೆ ಎಸ್ಐಟಿ ತಂಡ 2017ರ ಸೆಪ್ಟೆಂಬರ್ 5ರಂದು ಪರಶುರಾಮನ್ ವಾಗ್ಮೋರೆ ಗೌರಿ ಅವರಿಗೆ ಗುಂಡು ಹಾರಿಸಿದ್ದ ಎಂದು ಹೇಳಿದ್ದು, ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎಂದು ಕೋರ್ಟ್ ಗೆ ಎಸ್ಐಟಿ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.