SHARE

ಬೆಳಗಾವಿ: ಕಾರವಾರಕ್ಕೆ ವರ್ಗಾವಣೆಗೊಂಡಿದ್ದ ಬೆಳಗಾವಿ ಎಡಿಸಿ ಡಾ. ಸುರೇಶ ಇಟ್ನಾಳ ಮರಳಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ನೆರೆಯ ಕಾರವಾರ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಡಾ. ಸುರೇಶ ಇಟ್ನಾಳ ಎರಡು ದಿನದಲ್ಲಿ ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾಗಲಕೋಟ ಎಡಿಸಿಯಾಗಿ ವರ್ಗಾವಣೆಗೊಂಡಿದ್ದ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಶಿಧರ ಕುರೇರ ಸಹ ಬೆಳಗಾವಿ ಪಾಲಿಕೆ ಆಯುಕ್ತರಾಗಿ ಆಗಮಿಸುವುದು ಖಚಿತವಾಗಿದೆ.