SHARE

ಬೆಳಗಾವಿ: ಅಪರೂಪದ ವೈದ್ಯಕೀಯ ಬೆಳವಣಿಗೆಯಲ್ಲಿ ಮುರಿದು ತುಂಡರಿಸಿದ ದವಡೆ & ಹಲ್ಲುಗಳನ್ನು ಜೋಡಿಸುವ ಮೂಲಕ ನಗರದ VOTC (Vijaya Ortho & Trauma Centre) ಗಮನ ಸೆಳೆದಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಇಲ್ಲಿನ ಆಯೋಧ್ಯಾ ನಗರ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ನಿರ್ದೇಶಕ ಡಾ. ರವಿ ಪಾಟೀಲ, ಖಾನಾಪುರ ತಾಲೂಕಿನ ಬೆಟಗೇರಿ ಗ್ರಾಮದ ಬಾಲಕ ಕಿಶನ್ ದತ್ತು ಗುರವ(೧೪) ಅಪಘಾತದಲ್ಲಿ ತನ್ನ ಹಲ್ಲು ದವಡೆ ಸಹಿತ ಕಳೆದುಕೊಂಡಿದ್ದ, ಜತೆಗೆ ಪಾದದ ಭಾಗಗಳು ಸಹ ಮುರಿತಕ್ಕೊಳಗಾಗಿದ್ದವು ಅವುಗಳನ್ನು ಯಶಸ್ವಿಯಾಗಿ ಜೋಡಿಸಿದ್ದರಿಂದ ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಬೇರ್ಪಟ್ಟ ಅಂಗಾಂಗ ಭಾಗಗಳನ್ನು ಮರುಜೋಡಿಸಿ ಚೇತರಿಸಿಕೊಂಡಿರುವ ಬಾಲಕನನ್ನು ಮಾಧ್ಯಮಗಳೆದರು ಇಂದು ಪ್ರದರ್ಶಿಸಲಾಯಿತು.

ಸಾರ್ವಜನಿಕರು ಅಪಘಾತದಲ್ಲಿ ಬೇರ್ಪಟ್ಟ ಅಂಗಗಳನ್ನು ಆ ಕೂಡಲೇ ರೋಗಿ ಸಹಿತ ಆಸ್ಪತ್ರೆಗೆ ತಂದರೆ ಮರುಜೋಡನೆ ಮಾಡಬಹುದು ಎಂದು ಡಾ. ರವಿ ಪಾಟೀಲ ತಿಳಿಸಿದ್ದಾರೆ. ಈ ವಿಶಿಷ್ಠ ಹಾಗೂ ವಿರಳ ಶಸ್ತ್ರಚಿಕಿತ್ಸೆ ಈಗ ಬೆಳಗಾವಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನ ಸೆಳೆಯಿತು. ಡಾ. ಕಸ್ತೂಬ ದೇಸಾಯಿ, ಡಾ. ಹಾಲೇಶ, ಡಾ. ಶ್ರೀಧರ, ಡಾ. ಶಶಿಧರ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.