SHARE

ಬೆಳಗಾವಿ: ಬೆಳಗಾವಿಗೆ ಸರಕಾರ ಕಮಿಷ್ನರೇಟ್ ಕೊಟ್ಟಿತು. ಆದರೆ ಕಟ್ಟಡ ನೀಡದ್ದರಿಂದ ಕಚೇರಿ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಮಳೆಗೆ ಸೋರುತ್ತಿರುವ ಪೊಲೀಸ್ ಕಮಿಷ್ನರ್ ಕಚೇರಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸುವ ಮೂಲಕ ಇಂದು ರಕ್ಷಣೆ ಪಡೆದಿದ್ದಾರೆ.

ಮಳೆಗಾಲದ ಸಂದರ್ಭ ಈಗ ಕಚೇರಿ ಕೆಲಸ ನಿರ್ವಹಣೆಯಲ್ಲಿ ಕಮಿಷ್ನರ್ ಸಹಿತ ಕಚೇರಿ ಸಿಬ್ಬಂಧಿ ತೊಂದರೆಗೆ ಒಳಗಾಗಿದ್ದು, ಪೊಲೀಸ್ ಆಯುಕ್ತರ ಹೆಂಚಿನ ಮೇಲ್ಛಾವಣಿ ಕಚೇರಿಗೆ ಸೀಟ್ ಹಾಕಿಸಿ ಬಂದೋಬಸ್ತ ಮಾಡಲಾಯಿತು. ಸರಕಾರ ನೂತನ ಪೊಲೀಸ್ ಕಮಿಷ್ನರ್ ಕಟ್ಟಡ ಕಟ್ಟಿಸಲು ರೂಪುರೇಷೆ ಸಿದ್ಧಪಡಿಸಿದ್ದರೂ ಮುಂದಡಿ ಇಡದಿರುವುದು ಸಮಸ್ಯೆ ಜೀವಂತವಾಗಿಡಲು ಮುಖ್ಯ ಕಾರಣ. ಕಮಿಷ್ನರೇಟ್ ಜಾರಿಯಾಗಿ ಮೂರ್ನಾಲ್ಕು ವರ್ಷ ಕಳೆಯುತ್ತಿದ್ದರೂ ಹೊಸ ಕಟ್ಟಡ ಕಟ್ಟುವಲ್ಲಿ ಆಗುತ್ತಿರುವ ವಿಳಂಬ & ನಿರ್ಲಕ್ಷತೆಗೆ ಏನೆನ್ನಬೇಕು.