SHARE

ಬೆಳಗಾವಿ: ನಗರದ ವಡಗಾವಿ(ಸಂಭಾಜಿ ನಗರ) ಖಾಸಭಾಗ ಪ್ರದೇಶದಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದ್ದು, ಪಾಲಿಕೆ ಕಣ್ಣು ಮುಚ್ಚಿದೆ ಎಂದು ಮಹಿಳೆಯರು ಇಂದು ಪಾಲಿಕೆ ವಿರುದ್ದ ಘೋಷಣೆ ಕೂಗಿದರು. ಮಲೇರಿಯಾ, ಡೆಂಗ್ಯೂ ಹರಡುವ ಆತಂಕ ಎದುರಾಗಿದೆ. ಸಾಕಷ್ಟು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಮಹಿಳೆಯರು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹಾಗೂ ಉಪ ಮೇಯರ್ ಮಧುಶ್ರೀ ಪೂಜಾರಿ ಅವರನ್ನು ತರಾಟೆಗೆ ತೆಗೆದುಕೊಂಡು ಪಾಲಿಕೆ ವಿರುದ್ಧ ಘೋಷಣೆ ಕೂಗಿದರು.ವಡಗಾವಿ ಸಂಭಾಜಿ ನಗರ ಗಟಾರುಗಳಿಂದ ತುಂಬಿದ್ದು ಸೊಳ್ಳೆ ಕಾಟ ವಿಪರೀತವಾಗಿದೆ, ಪಾಲಿಕೆಯೂ ಕಸ ತ್ಯಾಜ್ಯ ನಿರ್ವಹನೆ ಮಾಡುತ್ತಿಲ್ಲ. ಪಾಲಿಕೆ ಸಿಬ್ಬಂಧಿ ದಿನ ಬರುವುದಿಲ್ಲ, ಬೀದಿನಾಯಿಗಳ ಕಾಟ ಹೆಚ್ಚಾಗಿದೆ, ಕುಡಿಯುವ ನೀರಿನ ತಾಪತ್ರಯ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹಾಗೂ ಮಧುಶ್ರೀ ಪೂಜಾರಿ ಮಾತನಾಡಿ ಕೂಡಲೇ ಅಧಿಕಾರಿಗಳಿಗರ ಸಮಸ್ಯೆಗಳ ಇತ್ಯರ್ಥಕ್ಕೆ ಸೂಚಿಸಲಾಗುವುದು. ಜತೆಗೆ ಅಧಿಕಾರಿಗಳ ಸಭೆ ನಡೆಸಿ ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.