SHARE

ಬೆಳಗಾವಿ: ಅಖಿಲ ಭಾರತೀಯ ಕೇಂದ್ರಿಯ ವಿದ್ಯಾಲಯ ಸಂಘಟನೆಯ ಪ್ರಪ್ರಥಮ ಯತ್ನ(Venture) ಸ್ಕೇಟಿಂಗ್ ಸ್ಪೋರ್ಟ್ಸ್ ಗೆ ಇಂದು ನಗರದ ಶಿವಗಂಗಾ ಸ್ಕೇಟಿಂಗ್ ರಿಂಕನಲ್ಲಿ ಕೇಂದ್ರಿಯ ವಿದ್ಯಾಲಯ ಸಂಘಟನಾ ಕೇಂದ್ರ ಕಚೇರಿಯ ಉಪಾಯುಕ್ತ( Deputy commissioner)ಪಿ. ದೇವಕುಮಾರ ಚಾಲನೆ ನೀಡಿದರು.ದೇಶದ ಉದ್ದಗಲದ KV ಶಾಲೆಯ ಸ್ಕೇಟಿಂಗ್ ಪಟುಗಳು ಇಂದು ಬೆಳಗಾವಿಯಲ್ಲಿ ಸೇರಿಬಂದರು. ಇಂದಿನಿಂದ ಪ್ರಾರಂಭವಾದ ರಾಷ್ಟ್ರಮಟ್ಟದ ಸ್ಕೇಟಿಂಗ್ ಜೂನ್ 28ರವರೆಗೆ ನಡೆಯಲಿದೆ.ದೇಶದ 19 KV ವಲಯಗಳ U14, U17 & U19 340ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು. ಸ್ಕಾಡ್, ಇನಲೈನ್ ಸ್ಕೇಟಿಂಗ್ ಪ್ರಕಾರಗಳ ಪ್ರದರ್ಶನ ನಡೆಯಿತು. ಇಂದು ಪ್ರಾರಂಭವಾದ ಈ ಇವೆಂಟನಲ್ಲಿ ವಿಜೇತರು SGFI( School Games Federation of India)ರವರ ಕ್ರೀಡಾ ಇವೆಂಟನಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.ಬೆಂಗಳೂರು, ಚೆನೈ, ಹೈದರಾಬಾದ, ಪಾಟ್ನಾ, ಮುಂಬಯಿ, ಜಬಲಪುರ, ಭೂಪಾಲ, ಗುರಗಾಂವ, ಎರ್ನಾಕುಲಂ, ದೆಹಲಿ, ಅಹ್ಮದಾಬಾದ್, ಜಮ್ಮು ಸೇರಿದಂತೆ ಇತರ ಭಾಗಗಳ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶಿವಗಂಗಾ ಸ್ಕೇಟಿಂಗ್ ರಿಂಕನ ಅಧ್ಯಕ್ಷೆ ಜ್ಯೋತಿ ಚಿಂಡಕ ಟಿ. ದೇವಕುಮಾರ,ವೀಕ್ಷಕರಾಗಿ ಜ್ಞಾನ ಪ್ರಕಾಶ ಕೇಂದ್ರ ಕಚೇರಿಯಿಂದ ಆಗಮಿಸಿದ್ದರು. ಪ್ರಚಾರ್ಯ ಅರುಣಕುಮಾರ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.