SHARE

ಬೆಳಗಾವಿ: ಬೆಳಗಾವಿ ಕಾಂಟೊನ್ಮೆಂಟ್ ಗೆ ರಾಜ್ಯ ಹಣಕಾಸು ಆಯೋಗದಿಂದ ಅನುದಾನ ಹಣ ಒದಗಿಸುವಂತೆ ದಂಡುಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ದಿವ್ಯಾ ಶಿವರಾಮ ಇಂದು ಮನವಿ ಸಲ್ಲಿಸಿದ್ದಾರೆ. ರಾಜ್ಯದ ಸ್ಥಳೀಯ(Local Bodies) ಸಂಸ್ಥೆಗಳಂತೆಯೇ ಕಳೆದ ವರ್ಷ ಜು. 28ಕ್ಕೆ ಬೆಳಗಾವಿ ಕೇಂದ್ರಿಯ ಕಾಂಟೊನ್ಮೆಂಟ್ ಬೋರ್ಡನ್ನು ಪರಿಗಣಿಸಲಾಗಿತ್ತು. ಆದುದರಿಂದ ರಾಜ್ಯ ಹಣಕಾಸು ಆಯೋಗದಿಂದ ಅನುದಾನ (Grant) ಒದಗಿಸುವಂತೆ ಸಿಇಓ ದಿವ್ಯಾ ಶಿವರಾಮ ಇಂದು ಸಚಿವ ರಮೇಶ ಜಾರಕಿಹೊಳಿ ಅವರನ್ನು ಸರ್ಕ್ಯೂಟ್ ಹೌಸನಲ್ಲಿ ಭೇಟಿ ಆಗಿ ಮನವಿ ಸಲ್ಲಿಸಿದರು.ರಾಜ್ಯದ ಇತರ ನಗರಸಭೆಗಳಿಗೆ ಹಣಕಾಸು ಅನುದಾನ ಕೊಡುವಂತೆಯೇ ಬೆಳಗಾವಿ ಕಾಂಟೊನ್ಮೆಂಟ್ ಸಹ ತನ್ನ ಗ್ರ್ಯಾಂಟ್ ಪಡೆಯಲು, ಪೌರಾಡಳಿತ ನಿರ್ದೇಶನಾಲಯದ ಆದೇಶದ ಪ್ರಕಾರವೇ ಅರ್ಹತೆ ಪಡೆದಿದೆ. ಪೌರಾಡಳಿತ ನಿರ್ದೇಶನಾಲಯದ ಆದೇಶ ಇದ್ದಾಗಲೂ ಸಹ ದಂಡುಮಂಡಳಿಗೆ ಯಾವುದೇ ಅನುದಾನ ಇಲ್ಲಿಯವರೆಗೆ ಬಂದಿಲ್ಲ ಎಂದು ದಿವ್ಯಾ ಶಿವರಾಮ ಸಚಿವರ ಗಮನ ಸೆಳೆದಿದ್ದಾರೆ.ಬೆಳಗಾವಿ ಕಾಂಟೊನ್ಮೆಂಟ್ ಗೆ ರಾಜ್ಯ ಪೌರಾಡಳಿತ ಇಲಾಖೆಯಿಂದ ಅನುದಾನ ಕೊಡಿಸುವುದಾಗಿ ಸಚಿವ ರಮೇಶ ಜಾರಕಿಹೊಳಿ ಈ ವೇಳೆ ಭರವಸೆ ನೀಡಿದ್ದಾರೆ. ದಂಡುಮಂಡಳಿ ಉಪಾಧ್ಯಕ್ಷ ಸಾಜೀದ್ ಶೇಖ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರವೀಣ ಬಾಗೇವಾಡಿ, ಎಂಎಲ್ಸಿ ವಿವೇಕರಾವ ಪಾಟೀಲ ಉಪಸ್ಥಿತರಿದ್ದರು.