SHARE

ಬೆಳಗಾವಿ: ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಜಂಗಮ ಮಠಾದೀಶರಿಗೆ ಮಾತ್ರ ಆದ್ಯತೆ ದೊರೆಯುತ್ತಿದ್ದು, ಜಂಗಮೇತರ ಮಠಾಧೀಶರನ್ನು ಕಡೆಗಣಿಸಲಾಗುತ್ತಿದೆ ಎಂದು ಕನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಜಿ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದಕ್ಕೆ ಪರ್ಯಾಯವಾಗಿ ಸಹೃದಯ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದರು. ಸಹೃದಯ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು ಇಲ್ಲಿ ಎಲ್ಲ ಜಾತಿಯವರಿಗೂ ಮಠಾಧೀಶರಗಳು, ವಟುಗಳು ಹಾಗೂ ಅರ್ಚಕರಿಗೆ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ಶಿರೋಳದ ಶಂಕರಾನಿರುದ್ದ ಸ್ವಾಮೀಜಿ, ಹಲ್ಯಾಳದ ಹರ್ಷಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ ಚಿಕ್ಕೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.