SHARE

ಬೆಳಗಾವಿ: ಬಡವರಿಗೆ ಆಶ್ರಯ ಮನೆ ಯೋಜನೆ ಮಾಡುವಲ್ಲಿ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿ ತುಕ್ಕಾನಟ್ಟಿ ಜನತೆ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಡತನ ಕೆಳಗಿನ ಜನತೆಗರ ಮನೆಗಳು ಮಂಜೂರಾಗುತ್ತಿಲ್ಲ, ₹30 ಸಾವಿರ ಹಣ ಕೊಟ್ಟವರಿಗೆ ಮಾತ್ರ ಮನೆ ಮಂಜೂರಿ ಸ್ಥಳೀಯ ಗ್ರಾಪಂ. ಮಾಡುತ್ತಿದೆ. ಹತ್ತಾರು ಎಕರೆ ಜಮೀನಿದ್ದವರಿಗೂ ಮನೆ ಮಂಜೂರು ಮಾಡಲಾಗಿದೆ, ಒಬ್ಬರಿಗೆ ಎರಡೆರಡು ಮನೆ ಮಂಜೂರಿ, ಕಾಲೇಜು ವಿದ್ಯಾರ್ಥಿನಿ ಹೆಸರಲ್ಲಿ ಮನೆ ಮಂಜೂರಿ ಸೇರಿ ಇತರ ಲೋಪಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ.

ಗೌರಿ ಹಮ್ಮನ್ನವರ, ಆರ್. ಎಂ. ಗದಾಡಿ, ಬಿ. ಎಸ್. ಮಾವರಕರ, ಸುಕುಮತಿ ಬಾಗೇವಾಡಿ ಸೇರಿ ನೂರಾರು ಬಡ ಫಲಾನುಭವಿ ಆಕಾಂಕ್ಷಿಗಳು ಉಪಸ್ಥಿತರಿದ್ದರು.