SHARE

ಬೆಳಗಾವಿ: ನಗರ ಉತ್ತರ ಸಂಚಾರಿ ಠಾಣೆ ವತಿಯಿಂದ ಜಾಧವ ನಗರ NCC ಕಚೇರಿಯಲ್ಲಿ ಇಂದು ಸಂಚಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸುಮಾರು 400 ಜನ ಎನ್ ಸಿಸಿ ಕೆಡೆಟಗಳು ಶಿಬಿರದಲ್ಲಿ ಭಾಗವಹಿಸಿ ಟ್ರಾಫಿಕ್ ನಿಯಮಗಳ ಮಾಹಿತಿ ಪಡೆದುಕೊಂಡರು. ಉತ್ತರ ಸಂಚಾರಿ ಇನ್ಸಪೆಕ್ಟರ್ ಆರ್. ಆರ್. ಪಾಟೀಲ ಮಾತನಾಡಿ ನಗರ ಜನಜೀವನದ ಶಿಸ್ತಿಗೆ ನಾಗರಿಕರು ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಅಗತ್ಯತೆ ಇದೆ ಎಂದರು. ಟ್ರಾಫಿಕ್ ಸಂಬಂಧಿತ ದೃಶ್ಯಗಳನ್ನು ಪ್ರಸಾರ ಮಾಡಿ, ಕೆಡೆಟಗಳಿಗೆ ಪ್ರಮಾಣವಚನ ಬೋಧಿಸಲಾಯಿತು.