SHARE

ಬೆಳಗಾವಿ: ಲಂಚ ಸ್ವೀಕರಿಸುತ್ತಿದ್ದ ಕಾರ್ಮಿಕ ಅಧಿಕಾರಿಗಳಿಬ್ಬರನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದು, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಭೀಮಪ್ಪ ಜಾಧವ ಹಾಗೂ ರಾಠೋಡ್ ಎಂಬ ಇಬ್ಬರು ಲೇಬರ್ ಇನ್ಸಪೆಕ್ಟರ್ ಗಳು ಈಗ ಎಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.ಶಹಾಪೂರ ಭಾರತ ನಗರದ ನಿವಾಸಿ ರವಿ ಕೇಶವ ಶಿಂಧೆ ಅವರು ನಡೆಸುತ್ತಿರುವ ಹೊಟೇಲಗೆ ಆಗಮಿಸಿದ್ದ ಕಾರ್ಮಿಕ ಅಧಿಕಾರಿಗಳು ದಾಖಲಾತಿ ಪರಿಶೀಲನೆ ಮಾಡಿ ತಿಂಗಳಿಗೆ ₹1000ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಜತೆಗೆ ಕಳೆದ ಜನೇವರಿಯಿಂದ ಇಲ್ಲಿಯವರೆಗೆ ಬಾಕಿ ₹6000 ಹಣಕ್ಕೆ ಅಧಿಕಾರಿಗಳಿಬ್ಬರೂ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಹಣದ ಮೊತ್ತ ಕಡಿಮೆ ಮಾಡಿ ₹3000ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಹೊಂಚು ಹಾಕಿದ್ದ ಎಸಿಬಿ ಅಧಿಕಾರಿಗಳು ಲಂಚದ ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.