SHARE

ಬೆಳಗಾವಿ: ಅಹಿತಕರ ಘಟನೆಯಲ್ಲಿ ಚಂದಗಡ ತಾಲೂಕಿನ ತಿಲಾರಿ ಘಾಟನಲ್ಲಿ ಕಾರು ಕಂದಕಕ್ಕೆ ಉರುಳಿ ಇಲ್ಲಿನ ರಾಮಲಿಂಗಖಿಂಡ ಗಲ್ಲಿಯ ಶ್ರೀಮಾತಾ ಭಕ್ತಿ ಮಹಿಳಾ ಸೊಸೈಟಿಯ ಉದ್ಯೋಗಿ ಐವರು ಯುವಕರು ಇಂದು ಅಸುನೀಗಿದ್ದಾರೆ.ಬೆಳಗಾವಿ ನಗರ ಹಾಗೂ ತಾಲೂಕಿನ ಯುವಕರು ಪ್ರವಾಸಕ್ಕೆ ತೆರಳಿದ್ದಾಗ ವ್ಯಾಗನ್-ಆರ್ ಕಾರು ತಿಲಾರಿ ಘಾಟ ಪ್ರದೇಶದ ಲಷ್ಕರ್ ತಿರುವಿನಲ್ಲಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.ಹೊಗೆ ಮಂಜು ಮುಸುಕಿನ ವಾತಾವರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಶಂಕೆ ವ್ಯಕ್ತಪಡಿಸಲಾಗಿದೆ. ಕೆಲ ಶವಗಳು ಕಾರಿನಲ್ಲಿ ಸಿಲುಕಿದ್ದರೆ, ಇನ್ನೂ ಕೆಲವು ದೂರದಲ್ಲಿ ಚಿಮ್ಮಿ ಹೋಗಿದ್ದವು. ಮಹಾರಾಷ್ಟ್ರ ಪೊಲೀಸರು ಹಾಗೂ ಸಾರ್ವಜನಿಕರು ಪರಿಶೀಲನೆ ನಡೆಸಿದರು.ಸುಮಾರು 30-32 ವಯಸ್ಕ ಯುವಕರಾದ ಬೋಕಮೂರಿನ ಯಲ್ಲಪ್ಪ ಪಾಟೀಲ, ಶಿವಾಜಿ ನಗರದ ಪಂಕಜ ಕಿಲ್ಲೇಕರ, ಬಾಳೇಕುಂದ್ರಿಯ ನಿತಿನ್ ರೇಡೆಕರ, ಅಷ್ಠೇ ಗ್ರಾಮದ ನಾಗೇಂದ್ರ ಗಾವಡೆ ಹಾಗೂ ಕಿಶನ್ ಎಂಬುವವರು ಮೃತರು ಎಂದು ತಿಳಿದು ಬಂದಿದೆ.ನಗರದ ಶ್ರೀಮಾತಾ ಭಕ್ತಿ ಮಹಿಳಾ ಸೋಸೈಟಿ ವತಿಯಿಂದ ಉದ್ಯೋಗಿಗಳು ಕಾರುಗಳಲ್ಲಿ ತಿಲಾರಿ ಘಾಟ ಪ್ರದೇಶಕ್ಕೆ ಇಂದು ಪ್ರವಾಸ ಹೋಗಿದ್ದರು, ಆ ಪೈಕಿ ಒಂದು ಕಾರು ಘಾಟ್ ನಿಂದ ಜಾರಿದ್ದು ಐವರು ಅಸುನೀಗಿದರು. ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.