SHARE

ಬೆಳಗಾವಿ: ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಹನಿ ಕಡಿಮೆಯಾಗಿದ್ದರೂ, ಬೆಳಗಾವಿಯಲ್ಲಿ ಬೆಂಬಿಡದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ನಗರದ ಹಳೆ ಪಿಬಿ ರಸ್ತೆಯ ಸಮರ್ಥ ನಗರ ಪ್ರದೇಶದ ಮನೆಗಳು ನೀರಿನಿಂದ ತುಂಬಿ ನಾಗರಿಕರು ಯಾತನೆ ಅನುಭವಿಸಿದರು.ಇಂದು ಬಿರುಸಿನ ಮಳೆಗೆ ನಗರದ ಖಾಸಭಾಗ ಪ್ರದೇಶ & ಬಳ್ಳಾರಿ ನಾಲಾ ಒತ್ತು ಪ್ರದೇಶಗಳು ನೀರಿನಿಂದಾವೃತವಾಗಿವೆ.ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.ಜಲಾವೃತ ಮನೆಗಳ ಪ್ರದೇಶಕ್ಕೆ ಉತ್ತರ ಶಾಸಕ ಅನಿಲ ಬೆನಕೆ ತೆರಳಿ ಜನತೆಗೆ ಸಮಾಧಾನ ನೀಡಿದರು. ಈ ವೇಳೆ ಜನತೆ ತಗ್ಗು ಪ್ರದೇಶದ ನೀರು ಹೊರಹೋಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದರು.