SHARE

ಬೆಳಗಾವಿ: ಭೀಮಾ ಕೋರೆಗಾಂವ ಘಟನೆಯ ಪ್ರಚೋದನಾ ಭಾಷಣಕಾರ ಎಂಬ ಕುಖ್ಯಾತಿಯ ಸಂಭಾಜಿ ಭೀಡೆ ಅವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.

ಸಂಕೇಶ್ವರದಲ್ಲಿ ಹಿಂದೂಸ್ಥಾನಿ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ The History of Raigarh Suvarna Sinhasana ಕುರಿತು ಸಂಭಾಜಿ ಉಪನ್ಯಾಸ ನೀಡುವವರಿದ್ದರು. ಜುಲೈ 21ರ ಮಧ್ಯರಾತ್ರಿಯಿಂದ 12ದಿನಗಳ ಕಾಲ ಜಿಲ್ಲೆ ಪ್ರವೇಶಕ್ಕೆ ನಿರ್ಭಂಧ ಹೇರಲಾಗಿದೆ.