SHARE

ಬೆಳಗಾವಿ: ಖಾನಾಪೂರದಲ್ಲಿ ಕನ್ನಡ ಶಿಕ್ಷಕ ಮಾಲತೇಶ.ಡಿ.ಸಿ ಗೆ ಫೋನಿನಲ್ಲಿ ಆವಾಜ್ ಹಾಕಿದ ಬಿಇಓ ಉಮಾ ಬರಗೂರ ಮತ್ತು ಮರಾಠಿ ಸಿಆರಪಿ ಜೆ.ಪಿ.ಪಾಟೀಲ ಕೆಲಸದಿಂದ ಅಮಾನತ್ತು ಮಾಡುವಂತೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ವತಿಯಿಂದ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಕಾಶೀಮ ಹಟ್ಟಿಹೊಳಿ ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ ಹತ್ತಿರದ ವರ್ಕಡ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಯ ಶಿಕ್ಷಕನಿಗೆ ಪೋನಿನಲ್ಲಿ‌ ದಮ್ಕಿ, ನಾಡದ್ರೋಹಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಮಾಡುತ್ತಿರುವ ಮರಾಠಿ ಸಿಆರಪಿ ಅವರನ್ನ ಮುಂದೆ ನಿಲ್ಲಿಸಿಕ್ಕೊಂಡು‌ ಅವರ ಪೋನಿನಲ್ಲೇ ಕನ್ನಡ ಶಿಕ್ಷನಿಗೆ ಎಕವಚನದಲ್ಲಿ‌ ಮಾತನಾಡಿದ ಬಿಇಓ ಎಂದು ಆರೋಪಿಸಿದ್ದಾರೆ.

ಕಳೆದ ೮ ವರ್ಷದಿಂದ ಶಿಕ್ಷಕ‌ ಮಾಲತೇಶ ಇವರು ಶಾಲೆಯ ಮುಖ್ಯ ಶಿಕ್ಷಕನ ಸ್ಥಾನವನ್ನು ವಹಿಸಿಕ್ಕೊಂಡಿದ್ದರು, ಆದರೆ ಮರಾಠಿ ಶಾಲೆಗೆ ಕನ್ನಡ ಶಿಕ್ಷಕ ಮುಖ್ಯ ಶಿಕ್ಷಕನಾಗಬಾರದೆಂದು‌ ಸಿ ಆರ್ ಪಿ, ಜೆಪಿ ಪಾಟೀಲನ‌ ಹಠವಾಗಿದೆ. ಇದೆ ಕಾರಣಕ್ಕೆ‌ ಸಿಆರಪಿ ಜೆ.ಪಿ.ಪಾಟೀಲ ಅವರು ತಮ್ಮ ಫೋನಿನ ಮೂಲಕ ದೂರವಾಣಿಯಿಂದ ಕರೆ ಮಾಡಿ ಮುಖ್ಯ ಶಿಕ್ಷಕನ ಸ್ಥಾನವನ್ನು‌ ಬಿಟ್ಟು ಕೊಡುವ ಕುರಿತು ತಾವು ಮಾತನಾಡಿ, ಬಿಇಓ ಗೂ ಫೋನಿನಲ್ಲಿ ಮಾತನಾಡಿಸಿದ ಘಟನೆ ಬೆಳಕಿಗೆ ಬಂದಿದೆ.

ಸಿ ಆರ್ ಪಿ ಬಿಇಓ ಎದುರಗಡೆ ನಿಂತು‌ ಕನ್ನಡ ಶಿಕ್ಷಕನಿಗೆ ದಮ್ಕಿ‌ ಹಾಕಿದ್ದಾನೆ. ಪೋನಿನಲ್ಲಿ‌ ನೀನು‌ ರಾಜಕೀಯ ಮಾಡಲಿಕ್ಕೆ ಬಂದಿಯೋ ಅಥವಾ ಶಿಕ್ಷಣ ಕಲಿಸಲು ಬಂದಿಯೋ ಎಂದು ಏಕವಚನದಲ್ಲಿ‌ ಮಾತನಾಡಿದ ಸಿ ಆರ್ ಪಿ. ಬಿಇಓ ಅವರು ಮರಾಠಿಗರಿಗೆ ಮುಖ್ಯ ಶಿಕ್ಷಕನ ಸ್ಥಾನವನ್ನು ಬಿಟ್ಟುಕೊಡಿ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಆದ್ದರಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಪ್ಪಿಸಸ್ಥರ ವಿರುದ್ಧ ಕ್ರಮಕೈಗೊಂಡು, ಬಿಇಓ ಹಾಗೂ ಸಿಆರಪಿ ಅವರನ್ನು ಕೆಲಸದಿಂದ ಅಮಾನತ್ತು ಮಾಡಬೇಕೆಂದು ಕರ್ನಾಟಕ ವಿಶ್ವ ನಿರ್ಮಾಣ ಸೇನೆ ವತಿಯಿಂದ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಕಾಶೀಮ ಹಟ್ಟಿಹೊಳಿ ಆಗ್ರಹಿಸಿದ್ದಾರೆ.