SHARE

ಬೆಳಗಾವಿ:”ಗಾಣಿಗರ ಏಕತೆ” ರಾಜ್ಯ ಸಮಾವೇಶ ಧಾರವಾಡದ ಹಳಿಯಾಳ ರಸ್ತೆಯ ಮಗದುಮ ಆನಂದ ಕಲ್ಯಾಣ ಮಂಟಪದಲ್ಲಿ ಭಾನುವಾರ ಜುಲೈ ೨೯ ರಂದು ಮುಂಜಾನೆ ೯ ಗಂಟೆಗೆ ಜರುಗಲಿದೆ. ಈಗಾಗಲೇ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಲಿಂ. ಸಿದ್ದು ನ್ಯಾಮಗೌಡ ಮಹಾವೇದಿಕೆಯಲ್ಲಿ ಜರುಗಲಿರುವ ಈ ರಾಜ್ಯ ಗಾಣಿಗ ಸಮ್ಮಿಲನ ಸಮಾರಂಭವನ್ನು ಅಖಿಲ ಭಾರತ ವ್ಯಾಪಾರಿ ಒಕ್ಕೂಟದ ಉಪಾಧ್ಯಕ್ಷ ಪ್ರಲ್ಹಾದ ಮೋದಿ ಉದ್ಘಾಟಿಸಲಿದ್ದಾರೆ. ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಇದೇ ವೇಳೆ ಗಾಣರತ್ನ, ವೈದ್ಯರತ್ನ, ಸಾಧಕರ ಸನ್ಮಾನವನ್ನು ಮಾಜಿ ಸಚಿವ ಲಕ್ಷ್ಮಣ ಸವದಿ ನೇರವೇರಿಸುವರು. ಯುವ ಪ್ರತಿಭೆಗಳಿಂದ ಗಾನಸುಧೆ ಜರುಗಲಿದೆ. ಬೆಳಗಾವಿ ಜಿಲ್ಲೆಯ ಸುಮಾರು ೧೦,೦೦೦ ಗಾಣಿಗ ಬಂಧುಗಳು ಮೋದಿಯವರ ಸಹೋದರರನ್ನು ಕಾಣಲು ಉತ್ಸುಕರಾಗಿ ಭಾಗವಹಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಗಾಣಿಗ ನೌಕರರ ಶಿಕ್ಷಣ ಹಾಗೂ ಸಾಂಸ್ಕ್ರತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಏಳುಕೋಟಿ ತಿಳಿಸಿದ್ದಾರೆ.