SHARE

ಬೆಳಗಾವಿ: ಮಿನಿ ಬಸ್ ನೂರಾರು ಮೀಟರ್ ಕಂದಕಕ್ಕೆ ಉರುಳಿ 33 ಪ್ರಯಾಣಿಕರು ಇಂದು ಅಸುನೀಗಿದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. 34 ಪ್ರಯಾಣಿಕರನ್ನು ಹೊತ್ತ ದಾಪೋಲಿ ಕೃಷಿ ವಿವಿಯ ನೌಕರರ ತಂಡ ಅಂಬೇನಳ್ಳಿ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭಾರಿ ಕಂದಕಕ್ಕೆ ಉರುಳಿದೆ. ಸ್ಥಳಿಯ ಶಿವಸೇನೆ ಪಕ್ಷದ ಶಾಸಕ
ಭರತ ಗೋಗಾವಲೆ ಸ್ಥಳದಲ್ಲೇ ಇದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದರು.ಮಹಾಬಳೇಶ್ವರ ಪ್ರವಾಸಕ್ಕೆ ದಾಪೋಲಿಯಿಂದ ಹೊರಟಿದ್ದ ತಂಡದ ಮೇಲೆ ಜವರಾಯ ಪಾಶ ಬೀಸಿದ್ದಾನೆ. ಘಾಟಗೆ ಬಸ್ ಉರುಳುವ ವೇಳೆ ಹೊರಬಿದ್ದ ಸಾವಂತ ಎಂಬಾತ ಬದುಕುಳಿದಿದ್ದು, ತಪ್ಪಲಿನಲ್ಲಿ ಮರೆಯಾದ ಬಸ್ಸಿನ ಮಾಹಿತಿ ಹೊರಜಗತ್ತಿಗೆ ನೀಡಿದ್ದಾನೆ. ರಾಯಗಢ ಜಿಲ್ಲಾಧಿಕಾರಿ ಡಾ. ವಿಜಯ ಸೂರ್ಯವಂಶಿ, ಸ್ಥಳೀಯ ಜನಪ್ರತಿನಿಧಿಗಳು & ಜನತೆಯೊಂದಿಗೆ ಸಂರಕ್ಷಣೆ ನಡೆಸಿದರು.