SHARE

ಬೆಳಗಾವಿ: ಕೌಟುಂಬಿಕ ವೈಷಮ್ಯ ಪ್ರಕರಣದಲ್ಲಿ ಪುಟ್ಟ ಮಗುವನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲೂಕು ಕೌಜಲಗಿಯಲ್ಲಿ ನಡೆದಿದೆ. ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಬಾಲಕಿ ಪ್ರೇಮಾ ಹೊಸಮನಿ ಮನೆ ಎದುರು ಆಟವಾಡುತ್ತಿದ್ದಾಗ ಕೊಚ್ಚಿ ಕೊಲೆ ಮಾಡಲಾಗಿದೆ. ಮಲ್ಲಪ್ಪ ಹೊಸಮನಿ ಎಂಬ ಸಂಬಂಧಿಯೇ ಕೊಲೆ ಮಾಡಿರುವ ವರದಿಯಾಗಿದೆ. ಕುಲಗೋಡ ಪೊಲೀಸರು ಪರಿಶೀಲನೆ ನಡೆಸಿ ಮಲ್ಲಪ್ಪನನ್ನು ವಶಕ್ಕೆ ಪಡೆಯಲಾಗಿದೆ.