SHARE

ಖಾನಾಪುರ: ನಾವೂ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಅಂತಾ ಹೋಗಬೇಕಾದರೆ, ಅನುಭವಿಸುವುದು ನರಕಯಾತನೆ ಏಕೆಂದರೆ ದಿನಾಲೂ ಬೆಳಿಗ್ಗೆ 7ಗಂಟೆಯಿಂದ 10ಗಂಟೆಯವರೆಗೆ ಬೀಡಿ ಬಸ್ಸು ನಿಲ್ದಾಣದಿಂದ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿ ಅಂತಾ ನಂದಗಡ, ಖಾನಾಪುರ ಮತ್ತು ಬೆಳಗಾವಿಗೆ ಹೋಗುತ್ತೆವೆ. ಆದರೆ ನಮಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೆ ಇರುವುದರಿಂದ ತರಗತಿಗಳು ಮತ್ತು ಪರೀಕ್ಷೆಗಳಿಂದ ವಂಚಿತರಾಗುತ್ತಿದ್ದೆವೆ ಎಂದು ವಿದ್ಯಾರ್ಥಿನಿ ವನಶ್ರೀ ಮಾತನಾಡಿದರು.ತಾಲೂಕಿನ ಬೀಡಿ ಗ್ರಾಮದಲ್ಲಿ ಬುಧುವಾರದಂದು ಶಾಲಾ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳು ಸೇರಿಕೊಂಡು ದೀಡಿರ ಪ್ರತಿಭಟಣೆ ನಡೆಸಿದರು. ಬೀಡಿ ಗ್ರಾಮದ ಇದು ಸುತ್ತಮುತ್ತಲಿನ ಅಂದರೆ ಲಿಂಗನಮಠ, ಕಕ್ಕೇರಿ, ರಾಮಾಪೂರ, ಭೂರಣಕಿ, ಮಾಸ್ಕೆನಟ್ಟಿ, ಘಸ್ಟೋಳ್ಳಿ, ಗೋಲಿಹಳ್ಳಿ, ಮಂಗೇನಕೊಪ್ಪ, ಕಸಮಳಗಿ, ಮುಗಳಿಹಾಳ ಅಂಗ್ರೋಳ್ಳಿ ಹೀಗೆ ಸುಮಾರು 15ರಿಂದ20 ಗ್ರಾಮಗಳಿಗೆ ಸಂಪರ್ಕಿಸಲು ಇರುವ ಮಧ್ಯಭಾಗ. ಆದ್ದರಿಂದ ಈ ಸ್ಥಳದಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಅಂತಾ ದೂರದ ನಂದಗಡ, ಖಾನಾಪುರ ಮತ್ತು ಬೆಳಗಾವಿಗೆ ಹೋಗುತ್ತಾರೆ. ಆದರೆ ಈಗ ಬೀಡಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸಾಕಾಗುತ್ತಿಲ್ಲ. ಬೀಡಿ ಮಾರ್ಗದ ಮೂಲಕ ಹಳಿಯಾಳ, ದಾಂಡೇಲಿ, ಖಾನಾಪುರ, ಶಿರಸಿ, ಯಲ್ಲಪೂರ ಮತ್ತು ಬೆಳಗಾವಿ ಸಾರಿಗೆ ಘಟಕದ ಬಸ್ಸುಗಳು ಸಂಚರಿಸುತ್ತವೆ.
ಬೀಡಿ ಬಸ್ಸು ನಿಲ್ದಾಣದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಲು ನಿಂತಹ ವಿದ್ಯಾರ್ಥಿಗಳಿಗೆ ನೋಡಿದ ಬಸ್ಸಿನ ಚಾಲಕರು ಮತ್ತು ಕಂಡಕ್ಟರ ಬಸ್ಸನ್ನು ನಿಲುಗಡೆ ಮಾಡದೆ ಹೋಗುತ್ತಾರೆ. ಇನ್ನು ಕೆಲವರು ಬಸ್ಸನ್ನು ನಿಲ್ದಾಣ ಬಿಟ್ಟು ಅನತಿ ದೂರ ಹೋಗಿ ನಿಲ್ಲಿಸುತ್ತಾರೆ ಆದರೆ ವಿದ್ಯಾರ್ಥಿಗಳು ಬಸ್ಸು ಹತ್ತಲು ಹೋದರೆ ಬಸ್ಸಿನೋಳಗೆ ಹತ್ತಬೇಡಿ, ನಿಮ್ಮನ್ನು ನೋಡಿ ಪ್ಯಾಸೆಂಜರಗಳು ಹತ್ತುವುದಿಲ್ಲ ಎಂದು ಹೇಳಿ ವಿದ್ಯಾರ್ಥಿಗಳಿಗೆ ಬಿಟ್ಟು, ಪ್ಯಾಸೆಂಜರಗೆ ಮಾತ್ರ ಹತ್ತಿಸಿಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ನಮಗೆ ದಿನನಿತ್ಯ ತರಗತಿಗಳು ಮತ್ತು ಕೆಲವೂಮ್ಮೆ ಪರೀಕ್ಷೆಗಳು ತಪ್ಪುತ್ತಿವೆ. ಆದ್ದರಿಂದ ನಮಗೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡಿರಿ ಎಂದು ರಸ್ತೆಗಿಳಿದು ಪ್ರತಿಬಟಿಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಂದಗಡ ಪಿ.ಎಸ್.ಐ ಸುಮಾ ನಾಯಕ ಹಾಗೂ ಪೋಲೀಸ್ ಸಿಬ್ಬಂಧಿಗಳು ಪರಿಸ್ಥತಿ ನಿಯಂತ್ರಿಸಲು ಹರಸಾಹಸ ಪಟ್ಟರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮಳೆ ಎನ್ನದೆ ಜಾಗಬಿಟ್ಟು ಕದಲಿಲ್ಲ. ಜೋತೆಗೆ ಸಂಭಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಓದಗಿಸಬೇಕೆಂದು ಘೋಷಣೆ ಕೂಗುತ್ತಾ ಅಲ್ಲೇ ನಿಂತರು.ಪ್ರತಿಭಟಣೆ ಪ್ರಾರಂಭವಾಗಿ 4 ತಾಸಿನ ನಂತರ ಖಾನಾಪುರ ಡಿಪೋ ಮ್ಯಾನೇಜರ ಚಂದ್ರಸೇಖರ ಜಿ.ಎಲ್ ಆಗಮಿಸಿದರು. ನಂತರ ಅವರು ವಿದ್ಯಾರ್ಥಿಗಳೋಂದಿಗೆ ಮಾತನಾಡಿ ಬೆಳಿಗ್ಗೆ 7ಗಂಟೆಗೆ ಬೀಡಿಯಿಂದ ಖಾನಾಪುರಕ್ಕೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡುತ್ತೆನೆ. ಜೋತೆಗೆ ಬಸ್ಸನ್ನು ನಿಲ್ದಾಣದಲ್ಲಿ ನಿಲ್ಲಿಸಿ ವಿದ್ಯಾರ್ಥಗಳಿಗೆ ಕರೆದುಕೋಡು ಬನ್ನಿ ಅಂತಾ ಚಾಲಕರಿಗೆ ಮತ್ತು ಕಂಡಕ್ಟರಗಳಿಗೆ ಖಡಕ್ ವಾರ್ನಿಂಗ ನಿಡುತ್ತೆನೆ ಎಂದಾಗ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.