SHARE

ಬೆಳಗಾವಿ/ನವದೆಹಲಿ: ಗೋವಾ – ಕರ್ನಾಟಕ ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದದ ಸಂಬಂಧದ ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿ ಅಂತಿಮ ತೀರ್ಪನ್ನು ಇಂದು ಸಂಜೆ ನೀಡಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನ್ಯಾಯ ಮಂಡಳಿ ನೀರನ್ನು ಹಂಚಿ ತೀರ್ಪು ಪ್ರಕಟಿಸಿದ್ದು, ಇದು ರಾಜ್ಯದ ರೈತರ ಪರವಾಗಿ ವರದಾನ ನೀಡಿದೆ. ಕುಡಿಯುವ ನೀರಿಗಾಗಿ ಕರ್ನಾಟಕಕ್ಕೆ 5.5 ಟಿಎಂಸಿ ನೀರು ಬಿಡಲು ನ್ಯಾಯಾಲಯ ಆದೇಶಿಸಿದೆ.