SHARE

ಬೆಳಗಾವಿ: ಭಾರಿ ಮಳೆಗೆ ಬದುಕು ಕಳೆದುಕೊಂಡ ಮಡಿಕೇರಿ ಜನತೆಗೆ ಬೆಳಗಾವಿಯಿಂದ ಅಲ್ಪ ಸಹಾಯ ಮಾಡಲಾಯಿತು. ನಗರದ ಕನ್ನಡ ಸಂಘಟನೆಗಳು ಒಗ್ಗಟ್ಟಾಗಿ ಇಂದು ಅಗತ್ಯ ಅಪಾರ ಸಾಮಗ್ರಿಗಳನ್ನು ಕೊಡಗಿಗೆ ರವಾಣಿಸಿದರು. ಸರಕಾರ ಆಹಾರ ವ್ಯವಸ್ಥೆ ಮಾಡಿದ್ದು, ಸಾಕಷ್ಟು ಆಹಾರ ಪದಾರ್ಥಗಳು ಆಗಲೇ ದಾನಿಗಳಿಂದಲೂ ಹರಿದು ಬರುತ್ತಿವೆ. ಅಗತ್ಯವಾಗಿ ಮಕ್ಕಳಿಗೆ ಸ್ವೇಟರ್, ಮಂಕಿ ಕ್ಯಾಪ್, ಕೆಮ್ಮು ನೆಗಡಿಗಾಗಿ ಸಿರಪ್, ಮಲಗಲು ಚಾಪೆ, ಹೊದೆಯಲು ಕಂಬಳಿ ಅಲ್ಲಿಯ ನಿರಾಶ್ರಿತರಿಗೆ ಬೇಕಾಗಿರುವ ಮಾಹಿತಿ ಹೊರಬಿದ್ದಿದೆ.ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ಸುತ್ತಲಿನ ಹಳ್ಳಿಗಳ ಸಾವಿರಾರು ಸಂತ್ರಸ್ತರು ಗಂಜೀ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆಳಗಾವಿ ಕನ್ನಡ ಸಂಘಟನೆಗಳ ಯುವಕರು ಇಂದು ರವಿವಾರ ಔಷಧಿ, ಸ್ಯಾನಿಟರಿ ಪ್ಯಾಡ್, ಮೆಡಿಕಲ್ ಕಿಟ್, ಹಾಸಿಗೆ, ಹೊದಿಕೆಗಳನ್ನು, ತಟ್ಟೆ, ಗ್ಲಾಸ ಸೇರಿದಂತೆ 25 ಸಾವಿರ ರೂ.ಮೌಲ್ಯದ ಸಾಮಗ್ರಿಗಳನ್ನು ಕೊಡಗಿಗೆ ಕಳಿಸಿದರು. ಮಕ್ಕಳಿಗಾಗಿ ಸ್ವೆಟರ್, ಕುಂಚಿಗೆ, ಸಿರಪ್, ಮಾತ್ರೆ ಹೊದಿಕೆಗಳನ್ನು ಸಹ ಕಳಿಸಲಾಯಿತು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತು ಕಾರ್ಯಕರ್ತರು ಸಾಮಗ್ರಿಗಳನ್ನು ರವಾಣಿಸಿದರು.