SHARE

ಬೆಳಗಾವಿ: ಗಣೇಶೋತ್ಸವ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಾಗರಿಕ ವ್ಯವಸ್ಥೆ ಮಾಡುವಂತೆ ಮಧ್ಯವರ್ತಿ ಶ್ರೀ ಗಣೇಶೋತ್ಸವ ಮಹಾಮಂಡಳ ಇಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರೊಂದಿಗೆ ಚರ್ಚೆ ನಡೆಸಿತು. ಗಣೆಶೋತ್ಸವ ನಡೆಯುವುದು ಹತ್ತಿರವಾಗುತ್ತಿದ್ದು ನಗರದಾದ್ಯಂತ ಕಂಗೆಡಿಸಿರುವ ರಸ್ತೆ ಗುಂಡಿ ಮುಚ್ಚಬೇಕು, ಬಂದಾಗಿರುವ ಹಾಯಮಾಸ್ಕ್ ದ್ವೀಪಗಳ ದುರಸ್ಥಿ ಮಾಡಬೇಕು, ಬೀದಿದೀಪಗಳು ಉರಿಯಬೇಕು, ಸಿಂಗಲ್ ವಿಂಡೋ ನಾಗರಿಕ ಕಚೇರಿ ತೆರೆಯಬೇಕು, ಗಣೇಶ ಮಂಡಳಿಗಳು ಹೆಚ್ಚುತ್ತಿರುವುದರಿಂದ ವಿಸರ್ಜನೆಗೆ ಆಗುತ್ತಿರುವ ದಟ್ಟನೆ ಮನಗಂಡು ಹಿಂದವಾಡಿ ಸರ್ವೋದಯ ರಸ್ತೆ ಬಳಿ ನೂತನ ಹೊಂಡ ನಿರ್ಮಿಸಬೇಕು, ಕಳೆದ ವರ್ಷ ಹಿಂದಿನ ಮೇಯರ್ ಪ್ರತಿ ಗಣಪತಿ ಮಹಾಮಂಡಳಕ್ಕೆ ₹5ಸಾವಿರ ನೀಡುವುದಾಗಿ ಘೋಷಿಸಿದ್ದರೂ ಇನ್ನೂ ಜಾರಿಯಾಗಿಲ್ಲ, ಈ ಬಾರಿ ಹಣ ಕೊಡಬೇಕು ಎಂದು ಆಗ್ರಹಿಸಿದರು.

ರಮೇಶ ಸೊಂಟಕ್ಕಿ, ನೇತಾಜಿ ಜಾಧವ, ವೇಳೆ ಕಾಸ ಕಲಘಟಗಿ, ಅಶೋಕ ಚಿಂಡಕ, ರಾವಬಹದ್ದೂರ್ ಕದಂ, ಶಂಕರರಾವ ಬಾಬಳಿ, ಹೀರಾಲಾಲ ಚವ್ಹಾನ, ರಾಜಕುಮಾರ ಬೋಕಡೆ, ಸತೀಶ ಗಾವಡೋಜಿ ಇತರರು ಉಪಸ್ಥಿತರಿದ್ದರು.