SHARE

ಬೆಳಗಾವಿ: ಚುನಾವಣೆಯಲ್ಲಿ 120 ಸೀಟ್ ಕಾಂಗ್ರೆಸ್ ಗೆ ಬಂದಿದ್ದರೆ ಸಿದ್ದರಾಮಯ್ಯನವರೇ ಮತ್ತೆ ಸಿಎಂ ಆಗುತ್ತಿದ್ದರು ಎಂದು ಅವರ ಆಪ್ತ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಪಕ್ಷದ ಹೈಕಮಾಂಡ ಅವರೇ ಅವರನ್ನು ಸಿಎಂ ಮಾಡಬೇಕು. ಒಳಗಿನವರು, ಹೊರಗಿನವರು ಸೇರಿ ಎಲ್ಲ ಕಡೆ ಷಡ್ಯಂತ್ರ ಇದ್ದೇ ಇರುತ್ತದೆ. ಅದೇ ರಾಜಕಾರಣ ಅಲ್ಲವೇ. ರಾಜಕಾರಣಿ ಯಾವಾಗಲೂ ಬಹಳ ಜಾಗರೂಕನಾಗಿರಬೇಕು ಎಂದು ಸತೀಶ ನುಡಿದರು.

ಗ್ರಾಮ ಪಂಚಾಯಿತಿಯಿಂದ, ದೇಶದ ಪ್ರಧಾನಿ ಹುದ್ದೆವರೆಗೆ ಎಲ್ಲ ಹಂತದಲ್ಲೂ ರಾಜಕಾರಣದಲ್ಲಿ ಷಡ್ಯಂತ್ರ ಇದ್ದೆ ಇರುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಎಚ್. ಡಿ.ಕುಮಾರಸ್ವಾಮಿ ಮತ್ತು ಡಾ. ಜಿ. ಪರಮೇಶ್ವರ ನೇತ್ರತ್ವದಲ್ಲಿ ಸರಕಾರ ಐದು ವರ್ಷ ಪೂರೈಸುತ್ತದೆ ಎಂದರು. ಅವಸರದ ಸಮ್ಮಿಶ್ರ ಸರಕಾರವಾದರೂ ಮದುವೆ ಗಟ್ಟಿ ದಾಂಪತ್ಯ ಮುಂದುವರೆಸುತ್ತದೆ ಎಂದು ಸೌಮ್ಯ ಚಟಾಕೆ ಹಾರಿಸಿದರು.