SHARE

ಬೆಳಗಾವಿ: ನಗರದ ಹಳೆ ಪಿಬಿ ರಸ್ತೆಯಲ್ಲಿ ನಿರ್ಮಿಸಿದ ನೂತನ ರೈಲ್ವೆ ಮೇಲ್ಸೆತುವೆ ಎರಡು ಬದಿ ಇಕ್ಕೇಲದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಇರುವ ಅಡೆತಡೆ ನಿವಾರಣೆಗೆ ಮುಂದಾದ ಶಾಸಕ ಅನಿಲ ಬೆನಕೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜತೆ ಚರ್ಚಿಸಿದರು.ಇಲ್ಲಿ ರಸ್ತೆ ನಿರ್ಮಾಣಕ್ಕೆ ಕೆಲ ಅಂಗಡಿ ಮಳಿಗೆಗೆಳನ್ನು ತೆರವು ಮಾಡಬೇಕಾಗಿದ್ದು, ಕೆಲವು ಅಂಗಡಿ ಮಾಲೀಕರು ಸಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು.ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳು ಸಹ ಇದ್ದರು. ಅನಿಲ ಬೆನಕೆ ಮಾತನಾಡಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಒಬ್ಬರ ವಿರೋಧವಿತ್ತು. ಅವರನ್ನು ಸಹ ಮನವೊಲಿಸಲಾಗಿದೆ ಎಂದರು. ಕಾಲುವೆ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಕಾಲುವೆ ನಿರ್ಮಾಣ ಆರಂಭಿಸಲಾಗುವುದು. ನಂತರ 30 ಅಡಿ ಅಗಲದ ರಸ್ತೆ ನಿರ್ಮಿಸಲಾಗುವುದು ಎಂದರು. ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ತೆರವು ಮಾಡಬೇಕಾದ ಮಳಿಗೆಗಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿ ನಾಲಾ ಕಾಮಗಾರಿ ಆರಂಭವಾಗುವ ನಿರೀಕ್ಷೆ ಮೂಡಿದೆ.