SHARE

ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಹಗುರ ಶಬ್ದ ಬಳಸಿದ ಸಚಿವ ರಮೇಶ ಜಾರಕಿಹೊಳಿ ವಿರುದ್ದ, ಸಚಿವ ಡಿ. ಕೆ. ಶಿವಕುಮಾರ ಕ್ಷುದ್ರರಾಗಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಉಸ್ತುವಾರಿ ಕೆ. ಸಿ. ವೇಣುಗೋಪಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ & ಡಿಕೆಶಿ ನಡುವೆ ತೀವ್ರ ವಾಗ್ವಾದ ನಡೆದಿದೆ.

ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಬಂಧ ಶಾಸಕಿ ಲಕ್ಷ್ಮೀ ಹೆಬ್ಬಾಳಕರ & ಜಾರಕಿಹೊಳಿ ಬ್ರದರ್ಸ್ ನಡುವೆ ನಡೆದಿದ್ದ ವೈಮನಸ್ಸು ಹಾಗೂ ಆ ನಂತರ ರಮೇಶ ಜಾರಕಿಹೊಳಿ ಬಳಸಿದ್ದ ‘ಕಾಲಕಸ’ ಹೇಳಿಕೆ ಈಗ ಈ ಬೆಳವಣಿಗೆಗೆ ಕಾರಣವಾಗಿದೆ. ವೀರಶೈವ ಮಹಾಸಭಾ ಹಾಗೂ ಲಿಂಗಾಯತ ಸಂಘಟನೆಗಳು ಸಹ ಜಾರಕಿಹೊಳಿ ಬ್ರದರ್ಸ್ ವಿರುದ್ದ ಕಿಡಿಕಾರಿದ್ದು, ಸಚಿವ ಸಂಪುಟದಿಂದ ರಮೇಶ ಜಾರಕಿಹೊಳಿ ಅವರನ್ನು ಹೊರಹಾಕುವಂತೆ ಒತ್ತಾಯಿಸಿದ್ದಾರೆ.

ಲಿಂಗಾಯತ ಸಂಘಟನೆಗಳು ಜಾರಕಿಹೊಳಿ ಬ್ರದರ್ಸ್ ವಿರುದ್ದ ಪ್ರತಿಭಟನೆ ಸಂಘಟಿಸಲು ಸಜ್ಜುಗೊಂಡಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ ಎಲ್ಲ ಬೆಳವಣಿಗೆಗಳ ಬಗ್ಗೆ ಪರಾಮರ್ಶಿಸಿದ್ದು ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಮೂಲ ಸ್ಪಷ್ಠಪಡಿಸಿದೆ.