SHARE

ಬೆಂಗಳೂರು: ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಬಹಳಷ್ಟು ಪ್ರಯತ್ನ ಮಾಡುತ್ತಲೇ ಇದೆ. ಆದರೆ ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ‌ ಈ ಕುರಿತು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರು ಪಕ್ಷ ಬಿಟ್ಟು ಹೋಗ್ತಾರೆ. ಅವರ ಜೊತೆ 23ಜನ ಶಾಸಕರು ಹೋಗ್ತಾರೆ ಅನ್ನೋದೆಲ್ಲ ಸತ್ಯಕ್ಕೆ ದೂರವಾದ ಮಾತು ಅಂತಹ ಯಾವುದೇ ಪ್ರಯತ್ನ ನಡೆಯೋದಿಲ್ಲ ಎಂದರು.

ರಮೇಶ್ ಜಾರಕಿಹೊಳಿಯವರ ಜೊತೆ ನಾನೇ ಚರ್ಚಿಸಿದ್ದು, ಅವರೂ ಸಹ ಅಂತದ್ದೇನೂ ಇಲ್ಲ ಅವೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಇದೆಲ್ಲ ಬಿಜೆಪಿಯವರ ಸೃಷ್ಟಿಯಾಗಿದ್ದು, ನಮ್ಮ ಮೈತ್ರಿ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೆ ಐದು ವರ್ಷ ಪೂರೈಸಲಿದೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ಅವರು ಯಾವ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ಲೋಕಸಭೆಯನ್ನೂ ಸಹ ಸಮರ್ಥವಾಗಿ ಎದುರಿಸಿ ಹೆಚ್ಚಿನ ಸ್ಥಾನಗಳನ್ನು ಗಲ್ಲುತ್ತೇವೆ ಎಂದು ಹೇಳಿದರು.