SHARE

ಬೆಳಗಾವಿ: ಹಿರಿಯ ರೈತ ಹೋರಾಟಗಾರ, ನಿವೃತ್ತ ರಸಾಯನಶಾಸ್ತ್ರಜ್ಞ ಪ್ರೊ. ಟಿ. ಟಿ. ಮುರಕಟ್ನಾಳt ಹೃದಯಾಘಾತದಿಂದ ಇಂದು ಬೆಳಿಗ್ಗೆ ಅಸುನೀಗಿದ್ದಾರೆ.
ಹಲವು ವರ್ಷಗಳಿಂದ ರೈತಹೋರಾಟದಲ್ಲಿ ನಿರಂತರ ತೊಡಗಿಕೊಂಡಿದ್ದ ಅವರು ರೈತ ಹೋರಾಟ ಗಟ್ಟಿಗೊಳಿಸಲು ಪ್ರಯತ್ನಿಸಿದ್ದರು. ಕಬ್ಬಿನ ಬಾಕಿ ಬಿಲ್, ಕಳಸಾ ಬಂಡೂರಿ ಕಾಮಗಾರಿ, ರೈತನ ಬೆಳೆಗೆ ಬೆಂಬಲ ಬೆಲೆ, ರೈತರಿಗೆ ವಿಮಾ ಸೌಲಭ್ಯ, ಕೃಷಿ ಮಾರುಕಟ್ಟೆಗಳ ಸುಧಾರಣೆ ಹಾಗೂ ಸಂಕಷ್ಟದ ಜೀವನ ಸಾಗಿಸುವ ರೈತರ ಸಾಲಮನ್ನಾಕ್ಕೆ ಇನ್ನಿಲ್ಲದ ಹೋರಾಟ ಸಂಘಟಿಸಿದ್ದರು. ಮೃದು ಸ್ವಭಾವದ ಪ್ರಬುದ್ಧ ಹೋರಾಟಗಾರ ರೈತಕುಲದಿಂದ ಕಣ್ಮರೆಯಾಗಿದ್ದಾರೆ. ರೈತ ಸಂಘಟನೆಗಳು ಅಪಾರ ದುಖಃ ವ್ಯಕ್ತಪಡಿಸಿವೆ.