SHARE

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪರಸ್ಪರ ಎದುರಾದರೂ ಸಚಿವ ರಮೇಶ ಜಾರಕಿಹೊಳಿ & ಲಕ್ಷ್ಮೀ ಹೆಬ್ಬಾಳಕರ ಅತ್ತಿತ್ತ ಮುಖ ಮಾಡಿದ ಸನ್ನಿವೇಶ ಗಮನ ಸೆಳೆಯಿತು. ಮಾದ್ಯಮಗಳೆದುರು ಮಾತನಾಡಲು ನಿರಾಕರಿಸಿದ ಸಚಿವ ಬೇಕಾದ್ರೆ ಫೋಟೊ ಹೊಡಕೊಳ್ಳಿ ನಾನು ತುಟಿ ಪಿಟಕ್ಕೆನ್ನೊಲ್ಲ ಎಂದು ಸರಸಗಾಟ ನಿರಾಕರಿಸಿದರು. ಏರ್ಪೋರ್ಟ್ ಲಾಂಜನಲ್ಲಿ ನಾಯಕ ನಾಯಕಿಯರು ಮಾತಾಡದಿದ್ದರೂ, ರಾಷ್ಟ್ರಪತಿ ಆಗಮನದ ನಂತರ ಬಂದ ಸಿಎಂ ಕಾರಿನಲ್ಲೇ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮದ ಸ್ಥಳ ಜಿಐಟಿ ವರೆಗೆ ಸಂಚರಿಸಿದರು. ವಿಮಾನ ನಿಲ್ದಾಣದಲ್ಲಿ ತಮ್ಮ ಸ್ವಾಗತಕಕೆ ಬಂದ ಸಚಿವ ರಮೇಶ ಜಾರಕಿಹೊಳಿ ಅವರ ಕೆನ್ನೆ ಸವರಿ ಆತ್ಮೀಯತೆಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತೋರಿಸಿದರು.