SHARE

ಬೆಳಗಾವಿ: ಅಭಿವೃದ್ಧಿ ನಾಗಾಲೋಟ ನಡೆಸಿರುವ ಜನಪ್ರಿಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಇಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಇಬ್ಬರೂ ಸರಕಾರದ ಅಭಿವೃದ್ಧಿ ಸಹಿಸದೇ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಯತ್ನ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಕಲಿಮುಲ್ಲಾ ಮಾಡಿವಾಲೆ, ಅಖಿಲಾ ಪಠಾಣ, ಸಯ್ಯದ್ ಮನ್ಸೂರ್, ಗೀರಿಶ ಗೋಕಾಕ, ಸಂತೋಷ ಕೊಕಡಳ್ಳಿ, ಪ್ರಕಾಶ ಸೋನ್ವಾಲಕರ, ಸುಭಾಷ ಪೂಜಾರಿ, ಬಿ.ಎಸ್ ರುದ್ರಗೌಡ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.