SHARE

ಬೆಳಗಾವಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೀಕ್ಷಿಸಿ ರಾತ್ರಿ 10:15ಕ್ಕೆ ಬೋಗಾರವೆಸ್ ವೇದಿಕೆಯಿಂದ ಇಳಿದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸೆಲ್ಫಿ ಕಾಟ ಶುರುವಾಯಿತು.ಪಡ್ಡೆ ಅಭಿಮಾನಿಗಳು ಕಿಕ್ಕಿರಿದು ಸೇರಿ ಶಾಸಕರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಎಲ್ಲರೊಂದಿಗೂ ಸಹಜ ಸೌಜನ್ಯದಿಂದ ಸತೀಶ ಜಾರಕಿಹೊಳಿ ಫೋಟೊಗೆ ಪೋಸ್ ನೀಡಿ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದರು.ಅವರು ಕಾರು ಏರುವವರೆಗೂ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸತೀಶ ಅವರಿಗೆ ಪಡಿಪಾಟಲು ಕೊಟ್ಟರು. ಜನರಿಂದ ತುಂಬಿದ ರಸ್ತೆ ಸೀಳಿಕೊಂಡು ಸತೀಶ ಕಾರು ಮರೆಯಾಯಿತು.