SHARE

ಬೆಳಗಾವಿ:ತಾಲೂಕಿನ ಖಲಕಾಂಬ ಗ್ರಾಮದ ಅರಣ್ಯ ಇಲಾಖೆ ಜಾಗದಲ್ಲಿ ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ಜಾಗ ಕೊಡುವುದನ್ನು ನಿಲ್ಲಿಸಿ, ಬೇರೆ ಜಾಗ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ಈಗಾಗಲೇ ಸ್ಮಶಾನಕ್ಕೆ ಜಾಗ ನೀಡಲು ಉದ್ದೇಶಿತ ರಿಸ. ನಂ. 206ರಲ್ಲಿ ಗುರುತಿಸಲಾಗಿದೆ. ಆದರೆ ಅದರ ಪಕ್ಕದ ಹೊಲಗಳಲ್ಲಿ ಜನತೆ ಮನೆಗಳನ್ನು ಕಟ್ಟಿಕೊಂಡು ಈಗಾಗಲೇ ವಾಸ ಮಾಡುತ್ತಿದ್ದಾರೆ. ವಾಸದ ಮನೆಗಳ ಬಳಿಯೇ ಸ್ಮಶಾನವಾಗುವುದರಿಂದ ಸಾಕಷ್ಟು ತೊಂದರೆಯಾಗಲಿದೆ. ಜಿಲ್ಲಾಡಳಿತ ಇನ್ನೊಂದು ಜಾಗ ಗುರುತಿಸಿ ಸ್ಮಶಾನಕ್ಕೆ ಜಮೀನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅರ್ಜುನ ಲಕ್ಷ್ಮಣ ಚೌಗುಲೆ, ಪರಶುರಾಮ ಮಾರುತಿ ಚೌಗುಲೆ, ಗಜಾನನ ಶಿರೋಳ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.