SHARE

ಬೆಳಗಾವಿ: ಧರ್ಮ ಜಾಗರಣ ಸಮನ್ವಯ ಸಮಿತಿ ವತಿಯಿಂದ ಹರಿದ್ವಾರದ ಪೂಜ್ಯ ರಾಮದೇವ ಬಾಬಾ ಆಶ್ರಮದಲ್ಲಿ ದಿ.27ರಿಂದ 5 ದಿನಗಳವರೆಗೆ ನಡೆಯಲಿರುವ “ಯುವ ಸಾಧು-ಸಂತರ ಸ್ವಾಧ್ಯಾಯ ಸಂಗಮ’ ದಲ್ಲಿ ಪಾಲ್ಗೊಳ್ಳಲು ಇಂದು ಬುಧವಾರ ಬೆಳಗಾವಿ ಜಿಲ್ಲೆಯಿಂದ 41 ಜನ ಪೂಜ್ಯ ಸ್ವಾಮೀಜಿಗಳು ತೆರಳಿದರು. ಬೆಳಿಗ್ಗೆ 7 ಘಂಟೆಗೆ ಸುಖ ಶಾಂತಿ ಮಂಗಲ ಕಾರ್ಯಾಲಯ, ಖಾನಾಪುರ ರಸ್ತೆಯಿಂದ ಧರ್ಮಜಾಗರಣ ಸಮಿತಿ, ವಿ ಎಚ್ ಪಿ ಪದಾಧಿಕಾರಿಗಳು, ಹಿಂದೂ ಸಮಾಜದ ಗಣ್ಯರು ಗೌರವ ಪೂರ್ವಕವಾಗಿ ಸ್ವಾಗತಿಸಿ ಅವರನ್ನು ಬಿಳ್ಕೊಟ್ಟರು.

ಗೋವಾದಿಂದ ವಿಮಾನಯಾನ ಮೂಲಕ ಪೂಜ್ಯರು ಹರಿದ್ವಾರಕ್ಕೆ ತೆರಳುವರು. ಆರ್.ಎಸ್.ಎಸ್.ನ ಸಂಘಚಾಲಕ ಮೋಹನ ಭಾಗವತ್ ಅವರು 3 ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ. ರಘನಂದನ್, ದಿಲೀಪ್ ವರ್ಣೇಕರ್ , ಕೃಷ್ಣ ಭಟ್ಟ, ಲಕ್ಷ್ಮಣ ಪವಾರ್, ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ರಾಜು ಚಿಕ್ಕನಗೌಡರ, ಮಲ್ಲಿಕಾರ್ಜುನ ಜಗಜಂಪಿ, ಚೈತನ್ಯ ಕುಲಕರ್ಣಿ, ಗಿರೀಶ್ ಇನಾಂದಾರ್ ಸೋಮನಾಥ್ ಹಿರೇಮಠ್, ಹಳಂಗಳಿ, ವಿಜಯ ಜಾಧವ ಇತರರು ಭಾಗವಹಿಸಿದ್ದರು.