SHARE

ಬೆಳಗಾವಿ: ಕಾಕತಿ ವಲಯದ ಭೂತರಾಮನಹಟ್ಟಿ ಅರಣ್ಯ ಪ್ರದೇಶದಲ್ಲಿ ಗಿಡ ಕಡಿದು ಅರಣ್ಯ ಅತಿಕ್ರಮಣ ಮಾಡುತ್ತಿದ್ದ ಆರೋಪದಲ್ಲಿ ಅಪ್ಪಣ್ಣ ಕಲ್ಲಪ್ಪ ನಾಯಿಕ ಎಂಬಾತನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಕತಿ RFO ನಾಗರಾಜ ಬಾಳೆಹೊಸೂರ ನೇತೃತ್ವದಲ್ಲಿ ಸಿಬ್ಬಂಧಿ ಕಾರ್ಯಾಚರಣೆ ನಡೆಸಿದರು. ಅರಣ್ಯ ಅತಿಕ್ರಮಣದಾರರು ಹೆಚ್ಚುತ್ತಿದ್ದು ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ DRFOಗಳಾದ ಸಂಜಯ ಮಗದುಮ, ಸಂಜಯ ಗಸ್ತಿ ಹಾಗೂ ಎಸ್. ಎಂ. ನದಾಫ್, ಸಿಬ್ಬಂದಿಗಳಾದ ರಮೇಶ ಕಮತೆ, ಪ್ರವೀಣ ಹಾದಿಮನಿ, ಕೃಷ್ಣಾ ಪಾಟೀಲ, ಮಾರುತಿ ಪಾಟೀಲ ಭಾಗವಹಿಸಿದರು.