SHARE

ಬೆಳಗಾವಿ: ಕುಂದಾನಗರಿ ಬಡ ಕ್ರೀಡಾ ಪ್ರತಿಭೆ ಮಲಪ್ರಭಾ ಜಾಧವ ಅವರನ್ನು ಓಲಂಪಿಕ ಕ್ರೀಡೆಗೆ ಸಿದ್ದಗೊಳಿಸುವುದಾಗಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.
ಮೊನ್ನೆ ನಡೆದ ಏಷಿಯನ್ ಗೇಮ್ಸನಲ್ಲಿ ಕಂಚು ಪದಕ ಪಡೆದ ಮಲಪ್ರಭಾ ಜಾಧವಗೆ ಮೋದಿ ನೆರವು ಮಾಡಿದ ಬಗ್ಗೆ ಉಲ್ಲೇಖಿಸಿದರು.

ಮಲಫ್ರಭಾ ಜಾದವ್ ಕುರಾಶ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಬಂದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಡಾ. ಪ್ರಭಾಕರ ಕೋರೆ ಅವರಿಗೆ ಒಲಿಂಪಿಕ್ ಕ್ರೀಡೆಗೆ ಸಿದ್ಧ ಪಡಿಸುವಂತೆ ಹೇಳುವುದಾಗಿ ಪಿಎಂ ಮೋದಿ ಭರವಸೆ ಕೊಟ್ಟಿದ್ದರು. ಪ್ರಧಾನಿ ಕಚೇರಿಯಿಂದ ಸೂಚನೆ ಬರುವ ಮುನ್ನವೆ ಕೆಎಲ್ ಇ ದತ್ತು ಪಡೆದಿದೆ. ಇಂದಿನಿಂದ ಮಲಪ್ರಭಾ ಜಾದವ್ ಕೆ ಎಲ್ ಇ ದತ್ತು ಪುತ್ರಿ ಇದ್ದಂತೆ ಎಂದು ಡಾ. ಪ್ರಭಾಕರ ತಿಳಿಸಿದರು. ಮಲಪ್ರಭಾ ಜಾದವ್ ಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತರಬೇತುದಾರರನ್ನ ಕರೆಸಿ ತರಬೇತಿ ನೀಡಲಾಗುತ್ತದೆ. ಅದರ ಸಂಪೂರ್ಣ ಜವಾಬ್ದಾರಿ ಕೆ ಎಲ್ ಇ ತೆಗೆದುಕೊಂಡಿದೆ. ಉಳಿದ ಐದು ಜನ ಕ್ರೀಡಾಪಟುಗಳಿಗೆ ಶಿಕ್ಷಣ, ಅಗತ್ಯ ತರಬೇತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.