SHARE

ಬೆಳಗಾವಿ: ಮೀನಿಗೆ ಈಜುವುದನ್ನು ಕಲಿಸಬೇಕಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಬಿಜೆಪಿ ಮುಖಂಡ ಪ್ರಭಾಕರ ಕೋರೆ ಅವರಿಗೆ ತಿರುಗೇಟು ನೀಡಿದ್ದಾರೆ. ಪ್ರಕಟನೆ ಹೊರಡಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಅನುಭವದ ಕೊರತೆ ಎಂಬ ಡಾ. ಪ್ರಭಾಕರ ಕೋರೆ ಹೇಳಿಕೆ ಉಲ್ಲೇಖಿಸಿ ತಿರುಗೇಟು ನೀಡಿದ್ದು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಅವರ ಮಗನಾಗಿ ರಾಜಕೀಯ ಮತ್ತು ರಾಜಕೀಯ ಜನರ ಒಡನಾಟ ಬಹುಹಿಂದಿನಿಂದ ಕಂಡಿದ್ದಾರೆ. ಯುವಕರನ್ನು ಸಂಘಟಿಸಿ, ರಾಜ್ಯದ ಮೂಲೆಮೂಲೆ ಸಂಚರಿಸಿದ್ದು ಅವರು ಪಕ್ಷದ ಸದೃಢ ಸಾರತಿ ಎಂದು ವಿನಯ ನಾವಲಗಟ್ಟಿ ಸಮರ್ಥಿಸಿಕೊಂಡಿದ್ದಾರೆ.