SHARE

ಬೆಳಗಾವಿ: ರಾಣಿ ಚನ್ನಮ್ಮ ವಿವಿ ಕುಲಪತಿಯ ಮೇಲೆ ಸೋಮವಾರ ಮಧ್ಯಾಹ್ನ ನಡೆದ ಹಲ್ಲೇ ನಡೆಸಿದವರನ್ನು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಬಂಧಿಸಿಬೇಕೆಂದು ಸಂಸದ ಸುರೇಶ ಅಂಗಡಿ ಒತ್ತಾಯಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಆರ್ ಸಿಯು ವಿವಿ ಬೆಳಗಾವಿಗೆ ಸಿಕ್ಕಿದೆ. ಅದರ ಘನತೆ ಗೌರವ ಕಾಯ್ದುಕೊಳ್ಳುವ ಜವಾಬ್ದಾರಿ ಬೆಳಗಾವಿ ಜನತೆಯದ್ದು ಆದರೆ ಈಗ ಹಲ್ಲೆಯಂತಹ ಪ್ರಕರಣಕ್ಕಿಳಿದಿದ್ದು ಖೇದಕರ ಎಂದರು.

ರಾಷ್ಟ್ರೀಯ ಹೆದ್ದಾರಿಯ ಅಫಘಾತಗಳಿಗೆ ವಿದ್ಯಾರ್ಥಿಗಳು ಅನಾನುಕೂಲತೆ ಅನುಭವಿಸದಂತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಪೂಜೆ ಸಲ್ಲಿಸಲಾಯಿತು. ಶಾಸಕ ಸತೀಶ ಜಾರಕಿಹೊಳಿ ಮತ್ತು ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಆಹ್ವಾನಿಸಲಾಯಿತು ಆದರೆ ಅವರು ಆ ಸಂದರ್ಭ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರು. ದಾಂಧಲೆ ಮಾಡಿದವರು ಸತೀಶ ಜಾರಕಿಹೊಳಿ ಅವರ ಬೆಂಬಲಿಗರೇ ಆಗಿದ್ದರೆ ಅವರಿಗೆ ಯೋಗ್ಯ ತಿಳಿವಳಿಕೆ, ಕಾನೂನು ಜ್ಞಾನ ನೀಡುವ ಪ್ರಯತ್ನ ಮಾಡಲಿ ಎಂದು ಸಲಹೆ ನೀಡಿದರು. ಪೊಲೀಸರು ಇಂತಹ ಸಂದರ್ಭ ಮೂಕಪ್ರೇಕ್ಷಕರಂತೆ ವರ್ತಿಸುವ ಔಚಿತ್ಯವೇನು ಅವರು ಕಾನೂನಿನ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.

ಸತೀಶ ಜಾರಕಿಹೊಳಿ ಬೆಂಬಲಿಗರು ಮಾಡಿದ ಇಂತಹ ಅನುಚಿತ ವರ್ತನೆಯಿಂದ ಸಾಮಾನ್ಯ ಜನರು ಹಾಗೂ ಅಧಿಕಾರಿ ವ್ಯವಸ್ಥೆ ಭಯದಲ್ಲಿ ಮುಳುಗಿದೆ. ಜಿಲ್ಲಾಡಳಿತ ಪುಂಡಾಟ ಹತ್ತಿಕ್ಕಲು ಸಂಪೂರ್ಣ ವಿಫಲರಾಗಿದೆ. ದಕ್ಷ ಕೆಲಸ‌ ಮಾಡಲು ಆಗದಿದ್ದರೆ ಅಂತಹ ಪೊಲೀಸ್ ಅಧಿಕಾರಿಗಳು ತಗಕ್ಷಣ ಜಾಗ ಖಾಲಿ ಮಾಡಿ ಎಂದರು. ಶಾಸಕ ಅನಿಲ ಬೆನಕೆ, ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಟೋಪಣ್ಣವರ ಇತರರು ಉಪಸ್ಥಿತರಿದ್ದರು.