SHARE

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ಕೊಡದೇ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಮೊಂಡುತನ ಮುಂದುವರೆಸಿದ್ದು, ಜಿಲ್ಲಾಡಳಿತ ಮಾತ್ರ ಮೌನ ವಹಿಸಿದೆ ಎಂದು ರೈತ ಸಂಘಟನೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಚಿವರು, ಶಾಸಕರು ಹಾಗೂ ಪ್ರಭಾವಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳೇ ಸಕ್ಕರೆ ಬಾಕಿ ಬಿಲ್ ಉಳಿಸಿಕೊಂಡಿವೆ. ಜಿಲ್ಲಾಧಿಕಾರಿ ಒಂದು ತಿಂಗಳು ಕಳೆದರೂ ರೈತರ ಸಮಸ್ಯೆ ಇತ್ಯರ್ಥಕ್ಕೆ ಗಮನ ಹರಿಸಿಲ್ಲ ಎಂದು ಆರೋಪಿಸಿದರು. ರೈತರೊಂದಿಗೆ ಸಮಾಲೋಚಿಸಿದ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಸದ್ಯದಲ್ಲೇ ಎಲ್ಲ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರ ಸಭೆ ಕರೆಯುವುದಾಗಿ ಡಿಸಿ ಅಭಯ ನೀಡಿದರು. ಇದಕ್ಕೂ ಮುನ್ನ ಡಿಸಿ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.