SHARE

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯ ಶ್ರೀ ಸಂಗೊಳ್ಳಿ ರಾಯಣ್ಣ ನಾಮಫಲಕ ಕಿತ್ತೆಸೆದ ಸಮಾಜ ಘಾತುಕರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ನಿವೃತ್ತ ಎಸ್ ಪಿ ಅಶೋಕ ಸದಲಗೆ ಇಂದು ಆಗ್ರಹಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆರ್ ಟಿಓ ವೃತ್ತದಿಂದ ಚನ್ನಮ್ಮ ವೃತ್ತದವರೆಗಿನ ರಸ್ತೆ ಶ್ರೀ ಸಂಗೊಳ್ಳಿ ರಾಯಣ್ಣ ರಸ್ತೆಯೆಂದೇ ಹಲವಾರು ವರ್ಷಗಳಿಂದ ಹೆಸರಾಗಿದೆ. ಇಂತಹ ರಸ್ತೆಯ ನಾಮಫಲಕ ಕಿತ್ತು ಕಸದಲ್ಲಿ ಎಸೆಯಲಾಗಿದೆ. ಇದರಿಂದ ರಾಯಣ್ಣ ಅಭಿಮಾನಿಗಳಿಗೆ ತೀವೃ ದುಖಃವಾಗಿದೆ. ಜಿಲ್ಲಾಡಳಿತ ತತಕ್ಷಣ ನಾಮಫಲಕ ಮರು ಅಳವಡಿಸಬೇಕು. ಪ್ರಾದೇಶಿಕ ಆಯುಕ್ತರ ಕಚೇರಿ ಎದುರಿನ ಉದ್ಯಾನದಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಹಿರಿಯ ನ್ಯಾಯವಾದಿ ಆರ್. ಪಿ. ಪಾಟೀಲ, ಲಕ್ಕಪ್ಪ ವಿ. ಆಲೋಶಿ, ಮಾಜಿ ಮಹಾಪೌರ ಯಲ್ಲಪ್ಪ ಕುರಬರ, ನಿವೃತ್ತ ಮೇಜರ್ ಗಂಗಾರಾಮ ಬಾಗನ್ನವರ, ಶಂಕರ ಹೆಗಡೆ, ಬಾಬು ಸಾಂಬ್ರೇಕರ, ಯಲ್ಲಪ್ಪ ಉಚಗಾಂವಕರ, ಬಿ. ಎಸ್. ಹಡಗಿನಾಳ ಸೇರಿ ಹಲವಾರು ಕಾರ್ಯಕರ್ತರು ಭಾಗವಹಿಸಿದರು.