SHARE

ಬೆಳಗಾವಿ: ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಕಿರಣ ಸುಬ್ಬಾರಾವನನ್ನು ಅಮಾನತುಗೊಳಿಸಲಾಗಿದೆ. ಮೂಲತಃ ಲೋಕೋಪಯೋಗಿ ಇಲಾಖೆಯ ಈತ ಮಹಾನಗರ ಪಾಲಿಕೆಯಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಕಳೆದ ಒಂದು ವರ್ಷದಿಂದ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಕಚೇರಿಯಲ್ಲಿ ಎಇಇ ಆಗಿ ಮರು ನಿಯುಕ್ತಿಗೊಳಿಸಲಾಗಿತ್ತು.

ಕಿರಣ ಸುಬ್ಬಾರಾವ ಅಮಾನತುಗೊಂಡ ವಿಷಯವನ್ನು ಮಾತೃ ಇಲಾಖೆ ನಗರಾಭಿವೃದ್ಧಿ ಇಲಾಖೆಗೆ ತಿಳಿಸಿದೆ. ಈತನ ಮನೆ, ಕಚೇರಿ, ಅಪಾರ್ಟಮೆಂಟಗಳ ಮೇಲೆ ಕಳೆದ 20ಮಾರ್ಚ್ 2018ರಂದು ಎಸಿಬಿ ದಾಳಿ ಮಾಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಕಂಡುಹಿಡಿದಿತ್ತು. ಎಸಿಬಿ ಪ್ರಕರಣದ ಕೂಲಂಕೂಷ ತನಿಖೆ‌ಮಾಡಿ ಪಿಡಬ್ಲೂಡಿ ಇಲಾಖೆ ಆಯ್ಕೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿತ್ತು. ಎಸಿಬಿ ವರದಿ ಆಧರಿಸಿ ಸುಬ್ಬಾರಾವನನ್ನು ಸರಕಾರ ಅಮಾನತು ಮಾಡಲಾಗಿದೆ. ಬೆಳಗಾವಿ, ಬೆಂಗಳೂರು, ಕಾರವಾರ ಸೇರಿ ಆರು ಕಡೆ ಎಸಿಬಿ ದಾಳಿ ಮಾಡಿ ದಾಖಲೆಗಳನ್ನು ಪತ್ತೆ ಮಾಡಲಾಗಿತ್ತು. ಆಸ್ತಿಪಾಸ್ತಿಯ ನಿಖರ ಮಾಹಿತಿಯನ್ನು ಎಸಿಬಿ ಗುಪ್ತ ಇಟ್ಟಿತ್ತು. ಬೆಳಗಾವಿ ಗೋಡ್ಸೆವಾಡಿ ಅಪಾರ್ಟಮೆಂಟ್, ರಾಣಿ ಚನ್ನಮ್ಮ ನಗರದ ಹೊಸ ಬಂಗಲೆ, ಹಿಂದೂನಗರದ ಮನೆ ಹಾಗೂ ಟಿಳಕವಾಡಿಯ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಸುಬ್ಬಾರಾವ ಕಾರವಾರ ಜಿಲ್ಲೆಯ ಸಿದ್ದಾಪುರದವನಾಗಿದ್ದು ಅಲ್ಲಿಯೂ ರೇಡ್ ಮಾಡಲಾಗಿತ್ತು. ಆತನ ಮಾಲೀಕತ್ವದ ಅಪಾರ್ಟಮೆಂಟ್ ಬೆಂಗಳೂರು ನಗರದಲ್ಲಿಯೂ ಇತ್ತು ಎನ್ನಲಾಗಿದೆ.

ಬೆಳಗಾವಿ ವಿಭಾಗದ ಎಸ್ಪಿ ಅಮರನಾಥರೆಡ್ಡಿ, ಡಿಎಸ್ಪಿ ಜಿ. ರಘು, ಜಾವೇದ ಮುಶಾಪುರಿ, ವೈ. ಎಸ್. ಧರನಾಯಕ, ವಿಶ್ವನಾಥ ಕಬ್ಬೂರಿ ದಾಳಿ ನಡೆಸಿದ್ದರು.