SHARE

ಬೆಳಗಾವಿ: ಕನ್ನಡಪರ ಸಂಘಟನೆಗಳ ಸತತ ಹೋರಾಟದಿಂದ ಬೆಳಗಾವಿಯಲ್ಲಿ ಎಂಇಎಸ್ ನೆಲಕಚ್ಚಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕರಾಳದಿನಾಚರಣೆ ನಡೆಸಲು ಎಂಇಎಸ್ ಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟರೆ ಕರವೇ ಸಿಡಿದೇಳಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಬಾರಿ ಯಾದರೂ ಬೆಳಗಾವಿಯಲ್ಲಿ ಕರಾಳದಿನಕ್ಕೆ ಬ್ರೇಕ್ ಹಾಕಬೇಕು. ಸರಕಾರ ಕೂಡಲೇ ಸ್ಪಷ್ಠ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಇಷ್ಟು ವರ್ಷ ನಡೆದುಕೊಂಡು ಬೆಳಗಾವಿಯ ಕೆಲವು ರಾಜಕಾರಣಿಗಳು ನೇರವಾಗಿ ಎಂಇಎಸ್ಚ ಟುವಟಿಕೆಯಲ್ಲಿ ಕೈಗೂಡಿಸಿದ್ದಾರೆ. ರಾಜಕಾರಣಿಗಳು ಎಂಇಎಸ್ ನೊಂದಿಗೆ ಒಳ ವ್ಯವಹಾರ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು. ಕರಾಳದಿನಕ್ಕೆ ಅನುಮತಿ ಕೊಟ್ಟರೆ ಕರವೇ ನೇರವಾಗೊ ಪ್ರತಿಭಟನೆಗೆ ಇಳಿಯಲಿದೆ ಎಂದರು. ಕೊನೆ ಕ್ಷಣದಲ್ಲಿ ಕರಾಳದಿನಕ್ಕೆ ಅನುಮತಿ ನೀಡುವ ಜಿಲ್ಲಾಡಳಿತ ನಿಬಂಧನೆ ಮುರಿಯುವ ಎಂಇಎಸ್ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು.

ಬೆಳಗಾವಿಗೆ ಶಿಫ್ಟ್: ಕರವೇ ರಾಜ್ಯ ಸಮಿತಿ ಬೆಂಗಳೂರಲ್ಲಿ ರಾಜ್ಯೋತ್ಸವ ಕ್ಷೀಣಗೊಳಿಸಿ ಬೆಳಗಾವಿ ರಾಜ್ಯೋತ್ಸವದಲ್ಲಿ ಲಕ್ಷತರ ಸಂಖ್ಯೆಯಲ್ಲಿ ಸೇರಿಬರಲಿದೆ ಎಂದು ಸ್ಪಷ್ಠಪಡಿಸಿದರು.

ಇಚ್ಛಿತರಿಗೆ ಸ್ಥಾನ ಬಿಟ್ಟುಕೊಡುವೆ: 5ವರ್ಷ ಬೆಳಗಾವಿ ಇಲ್ಲವೇ ಉಕ ಭಾಗದವರಿಗೆ ಕರವೇ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕಲ್ಲವೇ ಎಂಬ ಪ್ರಶ್ನೆಗೆ ಯಾರೇ ಆಗಲಿ ತನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಕು ಎಂದು ಮುಂದೆ ಬಂದರೆ ಸ್ಥಾನ ಬಿಟ್ಟುಕೊಡುವೆ. ರಾಜ್ಯಸಮಿತಿ ಈ ಬಗ್ಗೆ ನಿರ್ಧಾರ ಪ್ರಕಟಿಸಿದರೆ ಇಚ್ಛಿತ ವ್ಯಕ್ತಿಗೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಬೆಂಬಲ ನೀಡುವೆ ಎಂದರು.