SHARE

ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಏತ ನೀರಾವರಿ ಯೋಜನೆ ಕೂಡಲೇ ಪ್ರಾರಂಭಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ ಪ್ರತಿಭಟನೆ ನಡೆಸಿತು. ಸೌಭಾಗ್ಯ ಲಕ್ಷ್ಮೀ, ಹಿರೇನಂದಿಹಳ್ಳಿ, ಮಲಪ್ರಭಾ, ಶಿವಸಾಗರ, ಎಂ. ಕೆ. ಹುಬ್ಬಳ್ಳಿ, ಉದಪುಡಿ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸಬೇಕು, ಗ್ರಾಪಂ. ವ್ಯಾಪ್ತಿಯ ಮನೆ ಕಟ್ಟಲು ಕಾನೂನು ಸರಳೀಕರಣ, ಪಂಚಾಯಿತಿಯಲ್ಲಿ ಆಸ್ತಿ ದಾಖಲಾತಿಗೆ ಅವಕಾಶ, ಪ್ರತಿ ಲೀಟರ್ ಹಾಲುಗೆ ರೈತನಿಗೆ ₹೫೦ ನಿಗದಿ ಮಾಡುವುದು, ಕಬ್ಬು ಬೆಳೆಗಾರರ ಮೇಲಿನ ಕೇಸ್ ಹಿಂಪಡೆಯುವುದು, ವನ್ಯಪ್ರಾಣಿಗಳಿಂದ ಆದ ಬೆಳೆನಷ್ಟಕ್ಕೆ ಪರಿಹಾರ ಒದಗಿಸಲು ಕೋರಿದರು. ಸಿದಗೌಡ ಮೋದಗಿ, ಜಯಪ್ಪ ಬಸರಕೋಡ, ದುಂಡಯ್ಯ ಪೂಜಾರ, ನಾಗರಾಜ ಪೂಜಾರ, ಮಂಜುನಾಥ ಸಂಪಗಾವ ಇತರರು ಪ್ರತಿಭಟನೆ ನಡೆಸಿದರು.