SHARE

ಬೆಳಗಾವಿ: ಸಲಿಂಗಕಾಮ ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಪಂಚಪೀಠ ಸೆ. 6ರಂದು ನೀಡಿದ ತೀರ್ಪು ಸ್ವಾಗತಾರ್ಹವೆಂದು ಮಹೇಶ ಪಾಟೀಲ ತಿಳಿಸಿದರು. ನಗರದ ಹ್ಯೂಮಾನಿಟಿ ಫೌಂಡೇಶನ್ ಮತ್ತು ಸಂಗಮ ಸಂಸ್ಥೆ ಸಹಯೋಗದಲ್ಲಿ ಸುದ್ದಿಗೋಷ್ಠಿ ನಡೆಸಿ ಬಹುವರ್ಷಗಳ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವುದು ಸ್ವಾಗತಾರ್ಹ. ಮಂಗಳಮಯಖಿಯರ ಹಲವು ಸಮಸ್ಯೆಗಳ ಪರಿಹಾರದ ಬಗ್ಗೆ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

IPC ಸೆಕ್ಷೆನ್ 377 ರ ಅಡಿ ಸಲಿಂಗಕಾಮ ಅಪರಾಧ ಪಟ್ಟ ಕಳಚುದ ಸುಪ್ರೀಂ ತೀರ್ಪಿನ ಬಗ್ಗೆ ಸರಕಾರ ಹೆಚ್ಚು ಪ್ರಚಾರ ಮಾಡಬೇಕು, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೈತ್ರಿ ಯೋಜನೆ ಅನುಷ್ಠಾನ ಮತ್ತು ಕಾನೂನಾತ್ಮಕ ದಾಖಲಾತಿಗಳ ನೀಡುವ ಬಗ್ಗೆ ಸ್ಪಷ್ಠ ಮತ್ತು ಸಹಾನುಭೂತಿಯ ನಡೆ ಪ್ರದರ್ಶಿಸಲು ಸರಕಾರಿ ಸಿಬ್ಬಂಧಿಗೆ ತರಬೇತಿ ನೀಡುವುದು, ಇರಲು ಮನೆ- ಮಾಡೋಕೆ ಕೆಲಸ ಲೈಂಗಿಕ ಅಲ್ಪಸಂಖ್ಯಾತ ರಿಗೆ ಇಲ್ಲದ ಬಗ್ಗೆ ಸರಕಾರ ಗಮನ ಹರಿಸಬೇಕು, ಬೆಳಗಾವಿ ಜಿಪಂ. ಮತ್ತು ಮಹಾನಗರ ಪಾಲಿಕೆ ಸೂಕ್ತ ಉದ್ಯೋಗ ಮತ್ತು ಆಶ್ರಯ ಮನರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಾವು ಗಂಡೂ ಅಲ್ಲ, ಹೆಣ್ಣು ಅಲ್ಲ ನಾವೇನು ಮಾಡಬೇಕು. ನಮ್ಮ ಶೈಕ್ಷಣಿಕ ಅರ್ಹತೆ ನೋಡಿ ನಮಗೆ ಉದ್ಯೋಗ ಕೊಡಿ ಸ್ವಾಮಿ! ನಮ್ಮ ದೇಹಸೌಷ್ಠವ ನೋಡಿ ಏಕೆ ಹೀಗಳೆಯುತ್ತೀರಿ ಎಂದು ಸರಕಾರವನ್ನು ಕಿರಣ ಬೇಡಿ ನೇರವಾಗಿ ಪ್ರಶ್ನಿಸಿದರು.
ಭಿಕ್ಷೇ ಬೇಡಿ ಉಣ್ಣುವ ಕಾಯಕ ನಮಗ್ಯಾಕೆ ಬೇಕು. ನಮಗೆ ಉದ್ಯೋಗ ಮತ್ತು ಮನೆ ಕೊಡ್ರಿ ಎಂದು ಸರಕಾರವನ್ನು ಆಗ್ರಹಿಸಿದರು.

ದಬ್ಬಾಳಿಕೆ: ಪೊಲೀಸರು ಮಂಗಳಮುಖಿಯರನ್ನು ಅಪರಾಧಿಗಳಂತೆ ನೋಡುತ್ತಾರೆ. ವಿನಾಕಾರಣ ಪೊಲೀಸ್ ಇಲಾಖೆ ಹಿಂಸಿಸುತ್ತದೆ, ದೌರ್ಜನ್ಯ ಮಾಡುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ನ್ಯಾಯಯುತವಾಗಿ ಅಣ್ಣ ಅಪ್ಪ ಎಂದು ಭಿಕ್ಷೆ ಬೇಡಿ ತಿನ್ನಲು ಸಹ ಬಿಡುವುದಿಲ್ಲ. ಯಾವುದೋ ಕಳ್ಳತನ-ದರೋಡೆ ಕೇಸಗಳಲ್ಲಿ ಮಂಗಳಮುಖಿಯರನ್ನು ಫಿಟ್ ಮಾಡುವ ಕಾನೂನುಬಾಹೀರ ದಬ್ಬಾಳಿಕೆ ಪೊಲೀಸರು ಮಾಡುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಒಬ್ಬನೇ ಸಹಾಯಕ: ಕುಡಚಿ ಶಾಸಕ ಪಿ. ರಾಜೀವ ಮಂಗಳಮುಖಿಯರ ಶ್ರೆಯೋಭಿವೃದ್ಧಿಗೆ ದುಡಿದ ಒಬ್ಬನೇ ರಾಜಕಾರಣಿ. ನಮ್ಮ ಕಷ್ಟ ನಷ್ಟ ಸಹಾನುಭೂತಿಯಿಂದ ಕೇಳಿದ್ದಾರೆ ಎಂದು ಸ್ಮರಿಸಿಕೊಂಡರು. ಮೈತ್ರಿ ಯೋಜನೆ ಅಡಿ ಪರಿಹಾರ ನೀಡಲು ಅಧಿಕಾರಿಗಳು ಇಲ್ಲಸಲ್ಲದ ತೊಂದರೆ ನೀಡುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ತಾಣಾಜಿ, ದಿನೇಶ ಪಾಟೀಲ, ಕಿರಣ ಬೇಡಿ, ಮಹೇಶ ಕದಂ, ಮಹೇಶ ಪಾಟೀಲ, ಪ್ರಕಾಶ ಮರಾಠೆ ಇತರರು ಭಾಗವಹಿಸಿದರು.